Sunday, September 8, 2024

Latest Posts

Architectureನಲ್ಲಿ ಸ್ಟಡೀ ರೂಮ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ..!

- Advertisement -




ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ತಂದೆ ತಾಯಿಯ ಕನಸು ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬೇಕು, ಉತ್ತಮ ನಾಗರಿಕನಾಗಿರಬೇಕು ಎಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು, ಚೆನ್ನಾಗಿ ಓದಬೇಕು, ಜ್ಞಾನವೃದ್ಧಿ ಆಗಬೇಕು ಹಾಗೂ ಮಕ್ಕಳು ಏಕಾಗ್ರತೆಯನ್ನು ಹೊಂದಬೇಕು ಎಂದರೆ ಅವರ ಸ್ಟಡೀ ರೋಂಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾದರೆ ವಾಸ್ತುಶಾಸ್ತ್ರ ಪ್ರಕಾರ ಮಕ್ಕಳ ವಿದ್ಯಾಭ್ಯಾಸದ ರೂಮ್ ಯಾವ ರೀತಿ ಇರಬೇಕು ಎಂದು ನೋಡೋಣ. ವಾಸ್ತುಶಾಸ್ತ್ರದ ಪ್ರಕಾರ ಮಗುವಿನ ಕೋಣೆಯು ಉತ್ತರ ಅಥವಾ ಪೂರ್ವ ಭಾಗದಲ್ಲಿ ಸ್ಟಡೀ ಟೇಬಲನ್ನು ಇಡಬೇಕು. ಇದರಿಂದ ಮಕ್ಕಳು ತಮ್ಮ ಗುರಿ ಮತ್ತು ಸಾಧನೆಯ ಬಗ್ಗೆ ಗಮನ ಹರಿಸುತ್ತಾರೆ. ಅವರ ಗುರಿಯನ್ನು ತಲುಪಲು ಬೇಕಾದ ಯೋಜನೆಗಳನ್ನು ರೂಪಿಸಿಕೊಳ್ಳುವ ಮನೋಭಾವನೆ ಬೆಳೆಯುತ್ತದೆ. ಇನ್ನೂ ಮಗುವಿನ ಕೋಣೆಯ ಗೋಡೆಯ ಬಣ್ಣ ಯಾವಾಗಲೂ ಹಸಿರು ಬಣ್ಣದಿಂದ ಇದ್ದರೆ ಒಳ್ಳೆಯದು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ,ಮಕ್ಕಳಲ್ಲಿ ಹೊಸ ಹುಮ್ಮಸ್ಸು ಬರುತ್ತದೆ. ಇನ್ನು ಮಗುವಿನ ಕೋಣೆಯಲ್ಲಿ ಬಳಸುವ ಬೆಳಕು ತುಂಬಾ ಪ್ರಕಾಶಮಾನವಾಗಿ ಇರಬಾರದು . ಹಿತವಾದ ಬೆಳಕು ಮಕ್ಕಳಲ್ಲಿ ಶಾಂತಿ ಮತ್ತು ಸೌಮ್ಯತೆಯ ಸ್ವಭಾವವನ್ನುಉಂಟುಮಾಡುತ್ತದೆ. ಇನ್ನು ಯಾವುದೇ ಕಾರಣಕ್ಕೂ ಟಿವಿ9 ಇದ್ದರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬಾರದು, ಇದರಿಂದ ಅವರ ಏಕಾಗ್ರತೆ ಹಾಳಾಗುತ್ತದೆ. ಇನ್ನು ಸಾಮಾನ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಕೋಣೆಯಲ್ಲಿ ಭೂಗೋಳವನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಭೂಗೋಳವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಉತ್ತಮ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

- Advertisement -

Latest Posts

Don't Miss