ಇಂದಿನ ಕಾಲದಲ್ಲಿ ಜನ ತುಂಬಾ ಫಾಸ್ಟ್ ಆಗಿದ್ದಾರೆ. ಕೆಲಸವನ್ನ ಅಚ್ಚುಕಟ್ಟಾಗಿ ಬೇಗ ಬೇಗ ಮುಗಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಫಾಸ್ಟ್ ಆಗಿ ಓಡುವ ಬಸ್, ಕ್ಯಾಬ್, ಟ್ರೇನ್ ಇದೆ. ಇದೇ ರೀತಿ ಮನುಷ್ಯ ಕೂಡ ಕೆಲಸದ ಭರಾಟೆಯಲ್ಲಿ ಫಾಸ್ಟ್ ಫಾಸ್ಟ್ ಆಗಿ ಊಟ ತಿಂಡಿ ತಿಂದು, ಅಷ್ಟೇ ಫಾಸ್ಟ್ ಆಗಿ ರೋಗ ರುಜಿನಗಳನ್ನು ತಂದುಕೊಳ್ಳುತ್ತಿದ್ದಾನೆ. ಹಾಗಾದ್ರೆ ಯಾಕೆ ಆಹಾರವನ್ನು ಚೆನ್ನಾಗಿ ಅಗಿದು ತಿನ್ನಬೇಕು ಅಂತಾ ಹೇಳಲಾಗುತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರ ಬಳಿ ಹೋದಾಗ ಅಲ್ಲಿ ಕೂಡ ಅನ್ನವನ್ನು ಚೆನ್ನಾಗಿ ಅಗಿದು ತಿನ್ನಿ ಅಂತಾ ಸಲಹೆ ಕೊಡುತ್ತಾರೆ. ಇದಕ್ಕೆ ಕಾರಣ ಏನಂದ್ರೆ, ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತವಾಗುತ್ತದೆ. ಮತ್ತು ಜೀರ್ಣಕ್ರಿಯೆ ಉತ್ತಮವಾಗಿದ್ರೆ, ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಆಹಾರವನ್ನು ವೇಗವಾಗಿ ತಿನ್ನುವುದರಿಂದ ನಮ್ಮ ಹೊಟ್ಟೆ ತುಂಬುತ್ತದೆ ವಿನಃ, ನಾವು ತಿಂದ ಆಹಾರದಿಂದ ಏನೂ ಪ್ರಯೋಜನವಾಗುವುದಿಲ್ಲ. ಹೀಗೆ ತಿನ್ನುವುದು ನಮ್ಮ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಇದರಿಂದ ಬೊಜ್ಜು ಬೆಳೆಯುತ್ತದೆ. ಆದ್ದರಿಂದಲೇ ಆಹಾರವನ್ನು ಅಗಿದು ತಿನ್ನಬೇಕು. ಹೀಗೆ ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಆಹಾರದ ಪ್ರಮಾಣ ಸಮವಾಗಿರುತ್ತದೆ. ಇದು ದೇಹದಲ್ಲಿ ಬೊಜ್ಜು ಬೆಳೆಯಲು ಬಿಡುವುದಿಲ್ಲ. ಮತ್ತು ಜೀರ್ಣಕ್ರಿಯೆ ಉತ್ತಮವಾಗಿರುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಇಷ್ಟೇ ಅಲ್ಲದೇ, ನಿಧಾನವಾಗಿ ತಿನ್ನುವುದರಿಂದ, ನಮ್ಮ ದೇಹದ ಆಯಾ ಅಂಗಗಳು ಆರೋಗ್ಯವಾಗಿರುತ್ತದೆ. ನಮ್ಮ ತ್ವಚೆಯ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಇನ್ನು ಊಟ ಮಾಡುವಾಗ ಟಿವಿ ನೋಡುವುದಾಗಲಿ, ಮೊಬೈಲ್ ನೋಡುತ್ತ ಊಟ ಮಾಡುವುದಾಗಲಿ ಮಾಡಬೇಡಿ. ಕಿರಿಕಿರಿ ಇಲ್ಲದ, ಪ್ರಶಾಂತವಾದ ಜಾಗದಲ್ಲಿ ಕುಳಿತು ಊಟ ಮಾಡುವುದು ಉತ್ತಮ.

