‘ಗೆಲ್ತೀನಿ ಇಲ್ಲಾ ಸೋಲ್ತೀನಿ, ಆದ್ರೆ ಓಡಿ ಹೋಗೋದು ನನ್ನ ಚರಿತ್ರೆಯಲ್ಲೇ ಇಲ್ಲಾ’

ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಯೂಟ್ಯೂಬರ್ ಚಂದನ್ ಗೌಡ ಹವಾ ಜೋರಾಗಿದೆ. ಇಂದು ಚಂದನ್ ನಾಮಪತ್ರ ಸಲ್ಲಿಸಿದ್ದು, ಹಲವು ಯುವಕರು ಚಂದನ್‌ಗೆ ಸಾಥ್ ನೀಡಿದ್ದಾರೆ.

ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಬಂದ ಚಂದನ್ ಗೌಡ ನಾಮಪತ್ರ ಸಲ್ಲಿಸಿದ್ದು, ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು, ಗುಲ್ಬರ್ಗಾ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಯುವಕರು ಚಂದನ್‌ಗೆ ಸಾಥ್ ಕೊಟ್ಟಿದ್ದಾರೆ.

ಇದೇ ವೇಳೆ ಮಾತನಾಡಿದ ಚಂದನ್, ಚಂದನ್ ಗೌಡ ನಾಮಪತ್ರ ಸಲ್ಲಿಸಲ್ಲ, ಓಡಿ ಹೋಗ್ತಾನೆ ಅನ್ನೋ ಡೌಟ್ ತುಂಬಾ ಜನಕ್ಕಿತ್ತು. ಆದ್ರೆ ನಾನು ಇವತ್ತು ನಾಮಪತ್ರ ಸಲ್ಲಿಸಿದ್ದೇನೆ. 2 ಸಲ ನಾಮಪತ್ರ ಸಲ್ಲಿಸಿದ್ದೇನೆ. ಬೇಕಾದ್ರೆ ಇನ್ನೂ ಎರಡು ಸಲ ನಾಮಪತ್ರ ಸಲ್ಲಿಸುತ್ತೇನೆ. ನಾನು ಅಂದು ಹೇಳಿದ್ದೆ. ಇಂದೂ ಕೂಡ ಅದನ್ನೇ ಹೇಳುತ್ತೇನೆ. ಒಂದು ಗೆಲ್ಲುತ್ತೇನೆ ಇಲ್ಲಾ ಸೋಲುತ್ತೇನೆ. ಆದ್ರೆ ಓಡಿ ಹೋಗುವುದು ನಮ್ಮ ಚರಿತ್ರೆಯಲ್ಲೇ ಇಲ್ಲಾ ಎಂದು ಚಂದನ್ ಹೇಳಿದ್ದಾರೆ.

ಅಲ್ಲದೇ, ಪ್ರಚಾರಕ್ಕೇನು ತೊಂದರೆ ಇಲ್ಲಾ ನನಗೆ, ನನಗೆ ಜನರೇ ಮಾಧ್ಯಮ, ನನ್ನ ಕೈಯಲ್ಲಿರುವ ಮೊಬೈಲೇ ಮಾಧ್ಯಮ. ಆದರೆ ಕೆಲವು ಹಿರಿಯರು ಮೊಬೈಲ್ ಬಳಕೆ ಮಾಡುವುದಿಲ್ಲ. ಅಂಥವರಿಗೆ ಪತ್ರದ ಮೂಲಕ ನಾವು ಪ್ರಚಾರ ಮಾಡಬೇಕಾಗಿದೆ. ಅದಕ್ಕಾಗಿನ ನಿಮ್ಮ ಸಾಥ್ ಬೇಕು ಎಂದು ಚಂದನ್ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

‘ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ’

ಸ್ಟಾರ್‌ ಕ್ಯಾಂಪೇನರ್ಸ್ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಶೆಟ್ಟರ್‌ಗೂ ಸಿಕ್ಕಿದೆ ಸ್ಥಾನ

ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ, 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

About The Author