www.karnatakatv.net:ದಿನಕರ್ ತೂಗುದೀಪ ಶ್ರೀನಿವಾಸ್ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಡೈರೆಕ್ಟರ್. ಒಳ್ಳೆಯ ಕಥೆ ತಯಾರಿಮಾಡಿಕೊಂಡು ಅಪ್ಪು ಜೊತೆ ಸಿನಿಮಾ ಮಾಡಲು ಸಿದ್ದರಿದ್ದರು. ಈ ಬಗ್ಗೆ ಜಯಣ್ಣ ಬ್ಯಾನೆರ್ ಅಡಿಯಲ್ಲಿ ದಿನಕರ್ ಕಥೆಬಗ್ಗೆ ಮಾತುಕಥೆಗಳು ನಡೆದಿತ್ತು. ನಿರ್ಮಾಪಕರಾದ ಜಯಣ್ಣ-ಭೋಗಣ್ಣ ಕಥೆಯನ್ನು ಒಪ್ಪಿಕೊಂಡಿದ್ದರು. ಈ ಕಥೆಗೆ ನಾಯಕನಾಗಿ ಪುನೀತ್ ರಾಜ್‌ಕುಮಾರ್ ಅವರಬಳಿ ಚರ್ಚೆನಡೆಸಲಾಗಿತ್ತು. ಪುನೀತ್ ಕೂಡ ಕಥೆಯನ್ನು ಒಪ್ಪಿಕೊಂಡು ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಜಯಣ್ಣ ಬ್ಯಾನರ್ ಅಡಿಯಲ್ಲೇ ಸಿನಿಮಾ ನಿರ್ಮಾಣ ಮಾಡಲು ಎಲ್ಲಾ ರೀತಿಯಾ ತಯಾರಿಗಳು ನಡೆದಿತ್ತು. ಜೇಮ್ಸ್ ಸಿನಿಮಾದಲ್ಲಿ ತೊಡಗಿದ್ದ ಅಪ್ಪು, ಜೇಮ್ಸ್ ನಂತರ ದಿನಕರ್ ಜೊತೆ ಕೆಲಸ ಮಾಡಲು ಮುಂದಾಗಿದ್ದರು. ಆಗೇಯೇ ಜನವರಿಯಲ್ಲಿ ಸಿನಿಮಾ ಮುಹೂರ್ತ ಮಾಡಲು ಪ್ಲಾನ್‌ಗಳೆಲ್ಲವು ಸಿದ್ದಗೊಂಡಿದ್ದವು, ಆದರೇ ಅಪ್ಪು ಅಕಾಲಿಕಾ ಮರಣದಿಂದ ದಿನಕರ್ ಎಲ್ಲಾ ಕನಸು, ಪ್ಲಾನ್‌ಗಳೆಲ್ಲವು ಹುಸಿಯಾಗಿದ್ದವು.
ಇದೀಗ ಹಲವು ಮಾತುಗಳು ಕೇಳಿಬರುತ್ತಿದ್ದು, ದಿನಕರ್ ರೆಡಿ ಮಾಡಿಕೊಂಡಿದ್ದ ಸ್ಕಿçಪ್ಟ್ ಏನಾಗುತ್ತದೇ, ಮತ್ತೇ ಇನ್ಯಾರಿಗೆ ಡೈರೆಕ್ಷನ್ ಮಾಡುತ್ತಾರೆ, ಅಥವಾ ಆ ಸ್ಕಿçಪ್ಟ್ ಇಟ್ಟುಕೊಂಡು ಬೇರೆಯಾರಿಗಾದರು ಸಿನಿಮಾ ಮಾಡುತ್ತಾರ ಎನ್ನುವ ಮಾತುಗಳಿಗೆ ಕೆಲಗಾಳಿಸುದ್ದಿಯ ಮೂಲಕ ಉತ್ತರ ಸಿಗುತ್ತಿದ್ದು. ದಿನಕರ್ ಜೊತೆ ಅಪ್ಪು ಮಾಡಬೇಕಿದ್ದ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಥೆಯಬಗ್ಗೆ ಯುವರಾಜ್ ಕುಮಾರ್ ಜೊತೆ ಚರ್ಚೆಗಳು ನಡೆದಿದ್ದು ಯುವ ಬಹುತೇಕ ಒಪ್ಪಿಕೊಂಡಿದ್ದಾರೆ. ಇನ್ನೂ ಕಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದು ಯುವಗಾಗಿಯೇ ಕೆಲ ವಿಷಯಗಳನ್ನು ಸೇರಿಸಲಾಗಿದೆ, ಈ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡದ ಮೂಲಕವೇ ಮಾಹಿತಿಗಳು ಹೊರಬೀಳಲಿದೆ. ಗಾಳಿಸುದ್ದಿಗಳು ಖಂಡಿತಾವಾಗಿ ನಿಜವಾಗುವ ಲಕ್ಷಣಗಳು ಕಾಣುತ್ತಿವೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ಇನ್ನೂ ಸಂತೋಷ್ ಆನಂದರಾಮ್ ಜೊತೆ ಅಪ್ಪು ಮಾಡಬೇಕಿದ್ದ ಸಿನಿಮಾ ಕೂಡ ಯುವರಾಜ್ ಕುಮಾರ್ ಮಾಡುತ್ತಾರೆ ಎನ್ನುವ ಮಾಹಿತಿಗಳು ಕೇಳಿ ಬಂದಿವೆ. ಸದ್ಯ ಸಂತೋಷ್ ಆನಂದ್ ರಾಮ್ ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೊರ‍್ಸ್ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ನಂತರ ಯುವರಾಜ್ ಜೊತೆ ಸೇರಿಕೊಳ್ಳಲಿದ್ದಾರೆ. ಯುವರಾಜ್ ಅವರು ತನ್ನ ಮೊದಲ ಚಿತ್ರ ಯುವರಣಧೀರ ಕಂಠೀರವ ಸಿನಿಮಾದ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಇವೆಲ್ಲವು ಮುಗಿದ ನಂತರ ಯುವರಾಜ್ ಮೊದಲು ಯಾರ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.