ಹೊಸದಿಲ್ಲಿ: ರಿಷಬ್ ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ಸ್ವತಃ ಯುವರಾಜ್ ಸಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ರಿಷಬ್ ಪಂತ್ ಜೊತೆ 45 ನಿಮಿಷ ಮಾತನಾಡಿದ್ದು ಅರ್ಥಪೂರ್ಣವಾಗಿದೆ. ರಿಷಬ್ ಪಂತ್ ಚೆನ್ನಾಗಿ ಆಡಿದ್ದೀಯಾ, ಹಾರ್ದಿಕ್ ಪಾಂಡ್ಯ ಆಟ ನೋಡಲು ಚೆನ್ನಗಿತ್ತು ಎಂದು ಬರೆದುಕೊಂಡಿದ್ದಾರೆ.
ವಿಶೇಷ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ
ಆಂಗ್ಲರ ವಿರುದ್ಧದ ಕೊನೆಯ ಪಂದ್ಯದಲ್ಲಿ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಬೌಲಿಂಗ್‍ನಲ್ಲಿ 4 ವಿಕೆಟ್ ಪಡೆದ ಹಾರ್ದಿಕ್ ನಂತರ ಬ್ಯಾಟಿಂಗ್‍ನಲ್ಲಿ 71 ರನ್ ಹೊಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅರ್ಧ ಶತಕ ಜೊತೆಗೆ 4 ವಿಕೆಟ್ ಪಡೆದ 7ನೇ ಆಟಗಾರ ಎನಿಸಿದರು. ಜೊತೆಗೆ ತಂಡದ ಪರ ಮೂರು ಆವೃತ್ತಿಗಳಲ್ಲಿ ಅರ್ಧ ಜೊತೆ 4 ವಿಕೆಟ್ ಪಡೆದ ತಂಡದ ಏಕೈಕ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೂರನೆ ಸ್ಥಾನಕ್ಕೇರಿದ ಟೀಮ್ ಇಂಡಿಯಾ
ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದ ಟೀಮ್ ಇಂಡಿಯಾ ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ 3ನೇ ಸ್ಥಾನಕ್ಕೇರಿದೆ. 109 ಅಂಕ ಪಡೆದ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನಕ್ಕಿಂತ (106) ಮೂರು ಅಂಕಗಳಿಂದ ಮುಂದಿದೆ. 128 ಅಂಕಗಳೊಂದಿಗೆ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದಯ 121 ಅಂಕಗಳೊಂದಿಗೆ ಇಂಗ್ಲೆಂಡ್ ಎರಡನೆ ಸ್ಥಾನದಲ್ಲಿದೆ.