News: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಸಂಜೆಯಷ್ಟೇ ಜಾಕೀರ್ ಹುಸೇನ್ ಹಠಾತ್ ಅನಾರೋಗ್ಯವಾದ ಕಾರಣ, ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಾಕೀರ್ ಹುಸೇನ್ ನಿಧನರಾಗಿದ್ದಾರೆ.
ಕಳೆದ 2 ವಾರಗಳಿಂದ ಹುಸೇನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇಂದು ಸಂಜೆ ಹಠಾತ್ ಆಗಿ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆದೆ ದಾಖಲಿಸಲಾಗಿತ್ತು. ಆದರೆ ಜಾಕೀನ್ ನಿಧನರಾಗಿದ್ದು, ಜಾಕೀನ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1988ರಲ್ಲಿ ಜಾಕೀರ್ ಹುಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಜಾಕೀರ್ ಭಾಜನರಾಗಿದ್ದರು. ಅಲ್ಲದೇ, ಸಂಗೀತ ಕ್ಷೇತ್ರದಲ್ಲೇ ಪ್ರಸಿದ್ಧ ಪ್ರಶಸ್ತಿ ಎನ್ನಿಸಿಕೊಂಡಿರುವ ಗ್ರಾಮಿ ಅವಾರ್ಡ್‌ನ್ನು ಜಾಕೀರ್ ತಮ್ಮ ವೃತ್ತಿ ಜೀವನದಲ್ಲಿ 3 ಬಾರಿ ಪಡೆದಿದ್ದಾರೆ ಅನ್ನೋದು ಅತ್ಯಂತ ಹೆಮ್ಮೆಯ ಸಂಗತಿ.