ವಿಶ್ವ ಕಪ್ ಟೂರ್ನಿ : ಅಭಿಮಾನಿಗಳ ಬಾಯಲ್ಲಿ ಪ್ರೀತಿಯಿಂದ ಗಬ್ಬರ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಶಿಖರ್ ಧವನ್, ವಿಶ್ವಕಪ್ ಟೂರ್ನಿಯಿಂದ ಹೊರ ಬಿದೇದಿದ್ದಾರೆ. ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಧವನ್ ಅನುಪಸ್ಥಿತಿ ಟೂರ್ನಿಯುದ್ದಕ್ಕೂ ತಂಡವನ್ನ ಕಾಡದೆ ಇರುವುದಿಲ್ಲ. ಗಾಯದಿಂದಾಗಿ ಟೂರ್ನಿಯ ಆರಂಭದಲ್ಲೇ ತವರಿಗೆ ಮರಳುತ್ತಿರುವ ಶಿಖರ್ ಧವನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಟ್ವಿಟರ್ ಮತ್ತು ಇನ್ ಸ್ಟಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಟೀಮ್ ಇಂಡಿಯಾ ಓಪನರ್, “ಗಾಯದಿಂದ ಗುಣಮುಖವಾಗಲು ಕಾಲಾವಕಾಶ ಬೇಕು. ದುರಾದೃಷ್ಟವಶಾ ನನ್ನ ಹೆಬ್ಬೆರಳಿಗೆ ಗಾಯವಾಗಿದ್ದರಿಂದ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನ ಪ್ರತಿನಿಧಿಸಲು ಆಗುತ್ತಿಲ್ಲ” ಎಂದಿದ್ದಾರೆ. ಇದುವರೆಗೂ ಧವನ್ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಿದ್ದಾರೆ. 2013ರ ಚಾಂಪಿಯನ್ ಟ್ರೋಫಿ, 2014 ಏಷ್ಯಾ ಕಪ್, 2015 ವಿಶ್ವಕಪ್ ಟೂರ್ನಿ, 2017 ಚಾಂಪಿಯನ್ಸ್ ಟ್ರೋಫಿ 2018 ಏಷ್ಯಾ ಕಪ್ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ್ರು. ಇನ್ನೂ 33 ವರ್ಷದ ಧವನ್ ಪಾಲಿಗೆ ಇದೇ ಅಂತಿಮ ವರ್ಡ್ ಕಪ್ ಆದ್ರು ಅಶ್ಚರ್ಯವಿಲ್ಲ ಯಾಕಂದ್ರೆ ಮುಂದಿನ ವಿಶ್ವಕಪ್ ವೇಳೆಗೆ ಧವನ್ ವಯಸ್ಸು 37 ಆಗಲಿದ್ದು, ಇತ್ತೀಚಿನ ಬಿಡುವಿಲ್ಲದ ಪಂದ್ಯಾವಳಿಗಳ ನಡುವೆ ಫಿಟ್ನೆಸ್ ಕಾಯ್ದುಕೊಳ್ಳುವುದು ಸವಾಲೆ ಸರಿ.