- Advertisement -
ಬೆಂಗಳೂರು: ಕಳೆದ ಬಾರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರ ಬಗ್ಗೆ ಕೇಂದ್ರ ಸಚಿವ ಡಿವಿಎಸ್ ಕೆಲ ಸಲಹೆ ನೀಡೋ ಮೂಲಕ ಕುಟುಕಿದ್ದಾರೆ. ಗ್ರಾಮವಾಸ್ತವ್ಯದ ವಾಸ್ತವ ತಿಳಿದುಕೊಳ್ಳಿ, ಅಂಗೈಯಲ್ಲಿ ಅರಮನೆ ತೋರಿಸಬೇಡಿ ಅಂತ ಟೀಕಿಸಿದ್ದಾರೆ.
ಕಳೆದ ಬಾರಿ ವಿಜಯಪುರ ಹಾಗೂ ಬೀದರ್ ಜಿಲ್ಲೆಯಲ್ಲಿ ಈ ಹಿಂದೆ ಕುಮಾರಸ್ವಾಮಿ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ಕುರಿತಾದ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಸಹಿತ ಟ್ವೀಟ್ ಮಾಡಿರೋ ಕೇಂದ್ರ ಸಚಿವ ಸದಾನಂದಗೌಡ ನೀವು ಈ ಬಾರಿ ಗ್ರಾಮ ವಾಸ್ತವ್ಯಕ್ಕೆ ಮನೆಗಳನ್ನು ಬಿಟ್ಟು ಶಾಲೆಗಳನ್ನು ಏಕೆ ಆರಿಸಿಕೊಂಡಿದ್ದೀರಿ ಅಂತ ಗೊತ್ತಿದೆ, ಬಡವರಿಗೆ ಅಂಗೈಯಲ್ಲಿ ಅರಮನೆ ತೋರಿಸಬೇಡಿ, ಗ್ರಾಮ ವಾಸ್ತವ್ಯದ ವಾಸ್ತವ ತಿಳಿದುಕೊಳ್ಳಿ ಅಂತ ಸರಣಿ ಟ್ವೀಟ್ ಮಾಡೋ ಮೂಲಕ ಸಿಎಂಗೆ ಸಲಹೆ ನೀಡಿದ್ದಾರೆ.
ಸಿಎಂ ಆಪ್ತರಿಂದಲೇ ಸರ್ಕಾರ ಬೀಳುತ್ತಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -