ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರಪ್ರದೇಶದ ಚುನಾವಣೆ ಮಹತ್ವದ ತಿರುವು ಪಡೆದುಕೊಂಡಿದೆ. ಈಗಾಗಿ ಉತ್ತರ ಪ್ರದೇಶದ ಚುನಾವಣೆ ಪ್ರಯುಕ್ತ ಯೋಜನೆ ರೂಪಿಸಲು ಇಂದು ದೆಹಲಿಯಲ್ಲಿ ಮಹತ್ವದ ಬಿಜೆಪಿ ಹೈಕಮಾಂಡ್ ಮಹತ್ವದ ಸಭೆಯನ್ನು ಕರೆದಿದೆ.
ಈ ಪ್ರಮುಖ ಸಭೆಯಲ್ಲಿ ಉತ್ತರಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಹಲವಾರು ಬಿಜೆಪಿ ನಾಯಕರು ಸೇರಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಉತ್ತರಪ್ರದೇಶದ ಚುನಾವಣೆ 7 ಹಂತಗಳಲ್ಲಿ ನಡೆಯಲಿದ್ದು ಈಗ ಎರಡು ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ, ಇನ್ನು 5 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಈ ಎಲ್ಲಾ ಸಂಪೂರ್ಣ ಚರ್ಚೆ ಇಂದು ನಡೆಯುತ್ತದೆ. ಇದೆಲ್ಲದಕ್ಕಿಂತಲೂ ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಬಿಟ್ಟು ಹೋಗುವವರ ಸಂಖ್ಯೆಯು ಹೆಚ್ಚಾಗುತ್ತದೆ. ಈರೆಗೆ 8 ಶಾಸಕರು ಹಾಗು 3 ಸಚಿವರು ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಈ ಪೈಕಿ ನರೇಂದ್ರ ಮೋದಿ ಅಮಿತ್‌ಶಾ ನೇತೃತ್ವದಲ್ಲಿ ಇಂದು ಪ್ರಮುಖ ಬಿಜೆಪಿ ನಾಯಕರುಗಳನ್ನೊಳಗೊಂಡoತೆ ಮಹತ್ವದ ಸಭೆ ನಡೆಯಲಿದೆ.
ಬಿಜೆಪಿ ಹೈಕಮಾಂಡ್ ದೆಹಲಿಯಲ್ಲಿ ಪ್ರಮುಖ ಸಭೆ; ಸಿ ಎಂ ಯೋಗಿ ಆದಿತ್ಯನಾಥ್ ಭಾಗಿ
- Advertisement -
- Advertisement -