Monday, December 11, 2023

Latest Posts

ಏಕದಿನ ಕ್ರಿಕೆಟ್ ನಲ್ಲಿ ಬೂಮ್ರಾ, ಶತಕ ಸಾಧನೆ..!

- Advertisement -

ಕ್ರೀಡೆ : ಟೀಮ್ ಇಂಡಿಯಾ ವೇಗಿ, ಯಾರ್ಕರ್ ಸ್ಟಾರ್ ಜೆಸ್ಪ್ರೀತ್ ಬೂಮ್ರಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಅರೇ ಬ್ಯಾಟ್ ಬೀಸೋದಕ್ಕೆ ಪರದಾಡೋ ಬೂಮ್ರಾ, ಸೆಂಚುರಿ ಬಾರಿಸಿದ್ರಾ ಅಂತ ಕನ್ ಫ್ಯೂಸ್ ಆಗಬೇಡಿ. ಬೂಮ್ರಾ ಸೆಂಚುರಿ ಬಾರಿಸಿರೋದು ರನ್ ಗಳಲ್ಲಿ ಅಲ್ಲ. ಬದಲಾಗಿ ವಿಕೆಟ್ ಗಳಲ್ಲಿ. ಹೌದು…ಕ್ರಿಕೆಟ್ ಜಗತ್ತಿನಲ್ಲಿ ತನ್ನ ಯಾರ್ಕರ್ ಗಳಿಂದಲೇ ಎದುರಾಳಿ ಬ್ಯಾಟ್ಸ್ ಮನ್ ಗಳ ನಿದ್ದೆ ಗೆಡುಸುತ್ತಿರುವ ಬೂಮ್ರಾ, ಏಕದಿನ ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೊಹಮ್ಮದ್ ಶಮಿ ನಂತರ, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಭಾರತದ ಎರಡನೇ ವೇಗಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾ ಎದುರು ಇಂದು, ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದ ಬೂಮ್ರಾ, ಇನಿಂಗ್ಸ್ ನ 4ನೇ ಓವರ್ ನಲ್ಲಿ ಲಂಕನ್ನರಿಗೆ ಆಘಾತ ನೀಡಿದ್ರು. ಲಂಕಾ ಓಪನರ್ ಕರುಣರತ್ನೆ ವಿಕೆಟ್ ಪಡೆಯುವ ಮೂಲಕ, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ನೂರು ವಿಕೆಟ್ ಪಡೆದ ಸಾಧನೆ ಮಾಡಿದ್ರು. ಏಕದಿನ ಕ್ರಿಕೆಟ್ ನಲ್ಲಿ ಶಮಿ, 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ಇನ್ನೂ ಬೂಮ್ರಾ 57 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಭಾರತದ ಪರ ಇರ್ಫಾನ್ ಪಠಾಣ್ 59, ಜಹೀರ್ ಖಾನ್ 65, ಅಜಿತ್ ಅಗರಕರ್ 67 ಮತ್ತು ಜಾವಗಲ್ ಶ್ರೀನಾಥ್ 68 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss