Monday, December 11, 2023

Latest Posts

ಟ್ವಿಟರ್ ನಲ್ಲೂ ಕೊಹ್ಲಿಯದ್ದೇ ಹವಾ, ಇಲ್ಲೂ ಉಳಿಯಲಿಲ್ಲ ಸಚಿನ್ ದಾಖಲೆ..!

- Advertisement -

ಕ್ರೀಡೆ : ಹೊಸ ಹೊಸ ದಾಖಲೆಗಳನ್ನ ನಿರ್ಮಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಸಾಕು, ಯಾವುದಾದ್ರು ಒಂದು ದಾಖಲೆ ಉಡೀಸ್ ಆಗೋದು ಗ್ಯಾರಂಟಿ. ಮೊನ್ನೆ ಮೊನ್ನೆ ತಾನೆ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ, ಅರ್ಧ ಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ, ಅತಿ ವೇಗವಾಗಿ ಹನ್ನೊಂದು ಸಾವಿರ ರನ್ ಕಲೆ ಹಾಕಿದ ಬ್ಯಾಟ್ಸ್ ಮನ್ ಅನ್ನೋ ದಾಖಲೆ ನಿರ್ಮಿಸಿದ್ರು. ಈ ಹಿಂದೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೇಳಿದಂತೆ, ಅವರ ದಾಖಲೆ ಗಳನ್ನೆಲ್ಲಾ ಕೊಹ್ಲಿ ಒಂದೊಂದಾಗಿ ಅಳಿಸಿ ಹಾಕುತ್ತ ಬರುತ್ತಿದ್ದಾರೆ. ಈ ನಡುವೆ ಕ್ರಿಕೆಟ್ ನಿಂದ ಆಚೆಗೂ ಕೂಡ ಕೊಹ್ಲಿ ಸಚಿನ್ ದಾಖಲೆ ಮುರಿದಿದ್ದಾರೆ.

ಹೌದು.. ಇಷ್ಟು ದಿನ ಕ್ರಿಕೆಟ್ ಅಂಗಳದಲ್ಲಿ ಸಚಿನ್ ದಾಖಲೆ ಗಳನ್ನ ಹಿಂದಿಕ್ಕುತ್ತಿದ್ದ ಕೊಹ್ಲಿ, ಈಗ ಕ್ರಿಕೆಟ್ ನಿಂದಾಚೆಗೂ ಸಚಿನ್ ರನ್ನ ಹಿಂದಿಕ್ಕಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಕೊಹ್ಲಿ, ಹಾಟ್ ಫೇವರಿಟ್. ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಅದು ಎಷ್ಟರಮಟ್ಟಿಗೆ ಅಂದ್ರೆ ಕ್ರಿಕೆಟ್ ದೇವರು ಸಚಿನ್ ರನ್ನು ಮೀರಿಸುವಷ್ಟು. ಹೌದು ಟ್ವಿಟರ್ ನಲ್ಲಿ ಕೊಹ್ಲಿ, ಮೂವತ್ತು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಸಚಿನ್ ರನ್ನ ಹಿಂದಿಕ್ಕಿದ್ದಾರೆ. ಇಂದು ಮೂವತ್ತು ಮಿಲಿಯನ್ ಫಾಲೋವರ್ಸ್ ದಾಟಿದ ನಂತರ, ಟ್ವಿಟರ್ ನಲ್ಲಿ ಪೊಸ್ಟ್ ಒಂದನ್ನ ಮಾಡಿರುವ ಕೊಹ್ಲಿ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನು ಸಚಿನ್ ತೆಂಡುಲ್ಕರ್ ಟ್ವಿಟರ್ ನಲ್ಲಿ 29.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಟ್ವಿಟರ್ ಫಾಲೋವರ್ಸ್ ಗಳ ಸಂಖ್ಯೆಯಲ್ಲೂ ಸಚಿನ್ ದಾಖಲೆ ಮುರಿದಿದ್ದಾರೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss