Sunday, September 15, 2024

Latest Posts

ಪ್ರಮಾಣವಚನಕ್ಕೆ ಗೈರಾಗಿ ಟರ್ಕಿಯಲ್ಲಿ ವಿವಾಹವಾದ ಸಂಸದೆ..!

- Advertisement -

ನವದೆಹಲಿ: ಇದೇ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದ ನಟಿ ನುಸ್ರತ್ ಜಹಾನ್ ಟರ್ಕಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಗೈರಾಗಿರೋ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಬಾಸಿರ್ ಹತ್ ಕ್ಷೇತ್ರದಿಂದ ತೃಣ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಗಾಳಿ ನಟಿ ನುಸ್ರತ್ ಜಹಾನ್ ದೂರದ ಟರ್ಕಿಯಲ್ಲಿ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಗೈರಾಗಿದ್ದಾರೆ. ನಿಖಿಲ್ ಜೈನ್ ಎಂಬುವರನ್ನು ವರಿಸಿರೋ ನಟಿ, ಸಂಸದೆ ನುಸ್ರತ್ ಚುನಾವಣೆಯಲ್ಲಿ ಭಾರೀ ಅಂತರ ಗೆಲುವು ಸಾಧಿಸಿದ್ದರು.

ಇಂದು ಬೆಳಗ್ಗೆ ತಮ್ಮ ಮದುವೆ ಫೋಟೋವನ್ನು ಟ್ವಿಟ್ಟರ್ ಮೂಲಕ ಸಂಸದೆ ನುಸ್ರತ್ ಹಂಚಿಕೊಂಡಿದ್ದಾರೆ. ಇನ್ನು ಜು 4ರಂದು ಕೊಲ್ಕತ್ತಾದಲ್ಲಿ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದ್ದು, ರಾಜಕೀಯ ಮುಖಂಡರು , ಸಿನಿಮಾ ನಟರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೋದಿ ವಿರುದ್ಧದ ಪ್ರಬಲ ಎದುರಾಳಿ ಯಾರು ಗೊತ್ತಾ ?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=IDVlJe3yj_o
- Advertisement -

Latest Posts

Don't Miss