ಕೊರೊನಾ ದಂತೆಯೇ ಅದರ ರೂಪಾಂತರಿ ವೈರಸ್ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ವರದಿಯ ಪ್ರಕಾರ ಈಗ ದೇಶದಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿಯಾಗಿದೆ. ಇನ್ನು ಬಲಿಯಾಗಿರುವ ವ್ಯಕ್ತಿ ರಾಜಸ್ಥಾನದ ಲಕ್ಷ್ಮೀನಾರಾಯಣ ನಗರದ 73 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದೆ .
ಇವರಿಗೆ ಡಿಸೆಂಬರ್ 15 ರಂದು ಕೊರೊನಾ ಧನಾತ್ಮಕ ಪರೀಕ್ಷೆ ನಡೆಸಿದ್ರು. ಅಂದಿನಿoದ ಇವರು ಆಸ್ಪತ್ರೆಯಲ್ಲಿಯೇ ಬೇರು ಬಿಟ್ಟಿದ್ರು.
ಇವರಿಗೆ ಪಾಸಿಟಿವ್ ಕೋವಿಡ್ ಇದ್ರೂ ಸಹ ಬೇರೆ ಬೇರೆ ಕಾಯಿಲೆಗಳು ಇದ್ದವು, ಮಧುಮೇಹ, ಅಧಿಕ ರಕ್ತದೊತ್ತಡ ಇತ್ತೆಂದು ವರದಿಯಾಗಿದೆ.
ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ. ಈ ಮಧ್ಯೆ ಡಿಸೆಂಬರ್ 21 ರಂದು ಅವರಿಗೆ ಕೋವಿಡ್ ನಗಟಿವ್ ಕಂಡುಬoದಿದೆ. ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಡಿಸೆಂಬರ್ 25 ರಂದು ಬಂದವು. ಇದರೊಂದಿಗೆ ವರದಿಯ ಪ್ರಕಾರ ಅವರು ಒಮಿಕ್ರಾನ್ ರೂಪಾಂತರವನ್ನು ಹೊಂದಿದ್ದಾರೆoದು ತಿಳಿದು ಬಂದಿದೆ.