Saturday, July 27, 2024

Latest Posts

ಫ್ರಾನ್ಸ್ ನಲ್ಲಿ ಪತ್ತೆಯಾಯ್ತು ಮತ್ತೊಂದು ರೂಪಾಂತರಿ ವೈರಸ್

- Advertisement -

ಪ್ರಪಂಚಕ್ಕೆ ಕೋವಿಡ್- ಬಂದಾಗಿನಿoದ ಅದು ಒಮ್ಮೆ ಏರಿ ಒಮ್ಮೆ ಇಳಿಯುತ್ತದೆ , ಈಬಾರಿಯೂ ಸಹ ಮುರನೇ ಅಲೆಯ ಸಂಬವ ಎದ್ದು ಕಾಣುತ್ತಿದೆ , ಇದರ ಬೆನ್ನಲ್ಲೆ ಮತ್ತೊಂದು ಆತಂಕದ ವಿಚಾರವನ್ನು ತಜ್ಞರು ಹೊರಹಾಕಿದ್ದಾರೆ,

ನವೆಂಬರ್​ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್​ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್​. ಆದರೆ ಈ ಮಧ್ಯೆ ಫ್ರಾನ್ಸ್​ನ ವಿಜ್ಞಾನಿಗಳು, ಕೊವಿಡ್​ 19ನ ಇನ್ನೊಂದು ರೂಪಾಂತರಿ ತಳಿಯನ್ನು ಪತ್ತೆ ಮಾಡಿದ್ದಾರೆ.  ಆಫ್ರಿಕನ್ ದೇಶ ಕೆಮೆರೂನ್​ಗೆ ಪ್ರಯಾಣ ಮಾಡಿದ್ದವರು ಮತ್ತು ಅವರಿಗೆ ಸಂಬಂಧ ಪಟ್ಟ ಸುಮಾರು 12 ಜನರಲ್ಲಿ ಈ ಹೊಸ ತಳಿ ಕಾಣಿಸಿಕೊಂಡಿದ್ದಾಗಿ ಐಎಚ್​ಯು ಮೆಡಿಟರೇನಿ ಇನ್​ಫೆಕ್ಷನ್​ ಇನ್​ಸ್ಟಿಟ್ಯೂಟ್​​ನ ಸಂಶೋಧಕರು ಹೇಳಿದ್ದಾರೆ. B.1.640.2 ರೂಪಾಂತರವಾದ ಇದಕ್ಕೆ ಐಎಚ್​ಯು (IHU) ಎಂದೇ ಹೆಸರಿಸಲಾಗಿದೆ. 

ಇದೀಗ ಪತ್ತೆಯಾಗಿರುವ ತಳಿಯಲ್ಲಿ 46 ರೂಪಾಂತರಗಳು ಮತ್ತು 37 ವಿಲೋಪನಗಳು ಇರುವುದಾಗಿ ಫ್ರಾನ್ಸ್ ಸಂಶೋಧಕರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆದ ವಿನಃ ಏನೂ ಹೇಳಲಾಗದು ಎಂದು ಹೇಳಿದ್ದಾರೆ.

- Advertisement -

Latest Posts

Don't Miss