Monday, September 25, 2023

Latest Posts

ವಿರಾಟ್ ಪಡೆಗೆ ಸುಲಭ ತುತ್ತಾಗುವದೇ ಅಫ್ಘಾನ್..?

- Advertisement -

ಕ್ರೀಡೆ : ವಿಶ್ವಕಪ್ ಮಹಾ ಸಮರದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಇಂದು ದುರ್ಬಲ ಅಫ್ಘಾನಿಸ್ಥಾನ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಿಂದ 7 ಪಾಯಿಂಟ್ ಕಲೆ ಹಾಕಿರುವ ವಿರಾಟ್ ಪಡೆ, ಇಂದು ಗೆಲುವು ದಾಖಲಿಸಿದ್ರೆ, ಸೆಮಿಫೈನಲ್ ನಲ್ಲಿ ತಂಡದ ಸ್ಥಾನ ಬಹುತೇಕ ಖಚಿತವಾಗಲಿದೆ.

ಇನ್ನೂ ಟೂರ್ನಿಯಲ್ಲಿ ಇದುವರೆಗೂ ಅಫ್ಘಾನಿಸ್ತಾನದ ಸಾಧನೆ ಶೂನ್ಯ. ಆಡಿದ ಐದು ಪಂದ್ಯಗಳಲ್ಲಿ ಸೋಲನುಭವಿಸಿರುವ ತಂಡ, ಪಾಯಿಂಟ್ ಪಟ್ಟಿಯಲ್ಲಿ ಅಂತಿಮ ಸ್ಥಾನಕ್ಕೆ ಕುಸಿದಿದ್ದು ನಿರ್ಗಮನದ ಹಾದಿ ಹಿಡಿದಿದೆ.

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧ ಅಧಿಕಾರಯುತ ಗೆಲುವು ದಾಖಲಿಸಿರುವ ಭಾರತ, ಎದುರಾಳಿ ತಂಡವನ್ನ ಯಾವುದೇ ಹಂತದಲ್ಲೂ ಹಗುರವಾಗಿ ಪರಿಗಣಿಸುವುದಿಲ್ಲ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್, ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ.

ಉಳಿದಂತೆ ನಾಯಕ ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಇನ್ನು ಆಲ್ ರೌಂಡರ್ ವಿಜಯ್ ಶಂಕರ್ ಕೂಡ ಗಾಯಕ್ಕೆ ತುತ್ತಾಗಿದ್ದು, ಇಂದು ಕಣಕ್ಕಿಳಿಯುವುದು ಅನುಮಾನ. ಶಂಕರ್ ಬದಲಿಗೆ ಕೇದಾರ್ ಜಾದವ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಉಳಿದಂತೆ ಮಹೇಂದ್ರ ಸಿಂಗ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ.

ಇನ್ನು ವೇಗಿ ಭುವನೇಶ್ವರ್ ಕುಮಾರ್ ಕೂಡ ಗಾಯಗೊಂಡಿದ್ದು, ಫ್ರಂಟ್ ಲೈನ್ ಬೌಲರ್ ಜಸ್ಪ್ರೀತ್ ಬುಮ್ರಾ ಜೊತೆ, ಮೊಹಮ್ಮದ್ ಶಮಿ ವೇಗದ ದಾಳಿ ಸಂಘಟಿಸಲಿದೇದಾರೆ. ಸ್ಪಿನ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಮುಖ್ಯ ಅಸ್ತ್ರವಾಗಲಿದ್ದಾರೆ. ಅಷ್ಟೇ ಅಲ್ಲದೆ ತನ್ನ ಬೆಂಚ್ ಸ್ಟ್ರೆಂಗ್ ಪರೀಕ್ಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನಂದನ್, ಸ್ಪೋರ್ಟ್ಸ್ ಬ್ಯೂರೋ , ಕರ್ನಾಟಕ ಟಿವಿ

ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!

- Advertisement -

Latest Posts

Don't Miss