Saturday, November 23, 2024

Latest Posts

ಬಿಟೌನ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಬೇಸರ..!

- Advertisement -

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅಂತವರನ್ನೂ ಬಾಲಿವುಡ್ ಗುರುತಿಸಲಿಲ್ಲ..! ಬಿಟೌನ್ ಬಗ್ಗೆ ಮೆಗಾಸ್ಟಾರ್ ಬೇಸರ.!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವೆ ನಡೆದ ಟ್ವೀಟ್ಸಮರವೇ ಸಖತ್ ಸುದ್ದಿಯಾಗ್ತಿದೆ. ನಿನ್ನೆಯೇ ಈ ಟ್ವೀಟ್ಸಮರಕ್ಕೆ ಅಂತ್ಯ ಹಾಡಿದ್ದ ಕಿಚ್ಚ ಒಂದೇ ಒಂದು ಖಡಕ್ ಟ್ವೀಟ್ ಮೂಲಕ ಬಾಲಿವುಡ್‌ನ ಬಾಯ್ ಮುಚ್ಚಿಸಿದ್ರು. ಇದರ ಬೆನ್ನಲ್ಲೆ ಕಿಚ್ಚನಿಗೆ ಇಡೀ ಸೌತ್ ಸಿನಿದುನಿಯಾ ಸಾಥ್ ಕೊಡ್ತು. ಅಲ್ಲದೇ ಹಲವು ನಟನಟಿಯರು, ರಾಜಕಾರಣಿಗಳು ಕಿಚ್ಚನ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಇದೀಗ ಮೆಗಾಸ್ಟಾರ್ ಚಿರಂಜೀವಿ ಸಹ ತಮಗೆ ಬಾಲಿವುಡ್‌ನಲ್ಲಾದ ಒಂದು ಬೇಸರದ ಅನುಭವವನ್ನ ಅಭಿಮಾನಿಗಳೊಂದಿಗೆ ಹಂಚಿಕೊAಡಿದ್ದಾರೆ. ಒಂದು ಕಆಲ ಇತ್ತು ಆಗ ಬಾಲಿವುಡ್ ಎಂದರೆ ಭಾರತೀಯ ಸಿನಿಮಾಗಳು ಎನ್ನುತ್ತಿದ್ದರು. ದಕ್ಷಿಣ ಭಾರzತದ ಸಿನಿಮಾಗಳಿಗೆ ಹೆಚ್ಚೇನು ಬೇಡಿಕೆಯಿರಲಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳಂದ್ರೆ ಬರೀ ಖಾನ್‌ಗಳ ಅನ್ನುವ ಕಾಲವಿತ್ತು. ವಿದೇಶಗಳಲ್ಲಿ ದಕ್ಷಿಣ ಭಾಷೆಯ ಸಿನಿಮಾಗಳನ್ನ ನೋಡುವವರೇ ಇರಲಿಲ್ಲ. ಆದರೀಗ ಕಲ ಬದಲಾಗಿದೆ, ಜನರು ಬದಲಾಗಿದ್ದಾರೆ. ಪ್ಯಾನ್ ಇಮಡಿಯಾ ಕಾನ್ಸೆಪ್ಟೇ ಕಂಪ್ಲೀಟಾಗಿ ಚೇಂಜಾಗಿದೆ. ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಹೆಚ್ಚು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹಿಂದಿ ಸಿನಿಮಾಗಳ ದಾಖಲೆಗಳನ್ನೆಲ್ಲಾ ಮುರಿದುಹಾಕಿದೆ ನಮ್ಮ ಸೌತ್ ಸಿನಿಮಾಗಳು. ನಮ್ದೇ ಹವಾ ಅಂತ ಬೀಗುತ್ತಿದ್ದ ಬಾಲಿವುಡ್ ಮಂದಿಗೆ ಕೆಜಿಎಫ್. ಅರ್ ಆರ್ ಆರ್, ಪುಷ್ಪ ಅಂತಹ ಸಿನಿಮಾಗಳು ಬೆವರಿಳಿಸಿದೆ. ಅಷ್ಟೇ ಅಲ್ಲ ಬಾಲಿವುಡ್‌ನಲ್ಲಿ ಯಾರೂ ಊಹಿಸದ ಲೆವೆಲ್‌ಗೆ ಸೌಂಡ್ ಮಾಡಿ ಬಾಲಿವುಡ್ ಮಂದಿಯ ನಿದ್ದೆಗೆಡಿಸಿದೆ.

ಬಾಲಿವುಡ್ ಬಗ್ಗೆ ಚಿರಂಜೀವಿ ಹೇಳಿದ್ದೇನು?

೧೯೮೯ರಲ್ಲಿ ನಡೆದ ಘಟನೆಯನ್ನ ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ. ಚಿರಂಜೀವಿ ನಟನೆಯ ರುದ್ರವೇಣಿ ಸಿನಿಮಾಗೆ ನರ್ಗೀಸ್ ದತ್ ಅವಾರ್ಡ್ ಸಿಕ್ಕಿತ್ತು. ಈ ಅವಾರ್ಡ್ ಪಡೆಂಯಲೆAದು ಚಿರಂಜೀವಿ ದೆಹಲಿಗೆ ತೆರಳಿದ್ದರು. ಈ ಕಾರ್ಯಕ್ರಮದ ಹಿಂದಿನ ದಿನ ಟೀ ಪಾರ್ಟಿಯನ್ನ ಆಯೋಜಿಸಿದ್ರು. ಈ ಪಾರ್ಟಿ ನಡೆದ ಸ್ಥಳದಲ್ಲಿ ಪೃಥ್ವಿರಾಜ್ ಕಪೂರ್ ಅವರಿಂದ ಹಿಡಿದೂ ಅಮಿತಾಬ್ ಬಚ್ಚನ್‌ವರೆಗೂ ಎಲ್ಲಾ ಬಾಲಿವುಡ್ ನಟರ ಫೋಟೋಗಳಿದ್ದವು. ಅವರು ಮಾಡಿದ ಸಾಧನೆ ಏನೆಂಬುದನ್ನ ಅಲ್ಲಿ ಬರೆಯಲಾಗಿತ್ತು. ಆದರೆ ಅಲ್ಲೆಲ್ಲಿಯೂ ದಕ್ಷಿಣ ಭಾರತದ ಖ್ಯಾತ ನಟರ ಫೋಟೋಗಳು ಒಬ್ಬರದ್ದೂ ಇರಲಿಲ್ಲ. ಕುತೂಹಲದಿಂದ ದಕ್ಷಿಣ ಭಾರತದ ಖ್ಯಾತರ ಬಗ್ಗೆ ಬರೆದಿದ್ದಾರೆ ಅಂತ ನೋಡಿದರೆ ಅಲ್ಲಿ ಜಯಲಲಿತಾ, ಎಮ್‌ಜಿಆರ್ ಒಟ್ಟಾಗಿರೋ ಒಂದು ಫೋಟೋ ಹಾಗೂ ಪ್ರೇಮ್ ನಜೀರ್ ಫೋಟೋವನ್ನ ಇದಕ್ಕೆ ಅಲ್ಲಿ ದಕ್ಷಿನ ಭಾರತದ ಸಿನಿಮಾ ಎಂದು ಬರೆದಿದ್ದರು. ದಕ್ಷಿಣ ಭಾತರದ ದಿಗ್ಗಜರಾದ ಡಾ.ರಾಜ್‌ಕುಮಾರ್. ಡಾ.ವಿಷ್ಣುವರ್ಧನ್, ಶಿವಾಜಿ ಗಣೇಶನ್, ಎನ್‌ಟಿ ರಾಮ್‌ರಾವ್, ನಾಗೇಶ್ವರರಾವ್ ಹಾಗೂ ಖ್ಯಾತ ನಿರ್ದೇಶಕರನ್ನ ಗುರುತಿಸಿರಲಿಲ್ಲ. ಆ ಕ್ಷಣ ನನಗೆ ತುಂಬಾ ಬೇಸರವಾಯಿತು. ಇದನ್ನ ಗಮನಿಸದ ಬಳಿಕ ಅವರು ಹಿಂದಿ ಸಿನಿಮಾವನ್ನು ಭಾರತೀಯ ಸಿನಿಮಾ ಎಂದು ಬಿಂಬಿಸಿದರು. ಇತರ ಸಿನಿಮಾಗಳನ್ನು ಪ್ರಾದೇಶಿಕ ಚಿತ್ರಗಳೆಂದು ಡಿವೈಡ್ ಮಾಡಿದ್ದಾರೆಂದೆನಿಸಿತು. ಜೊತೆಗೆ ಅಲ್ಲಿ ಗೌರವವನ್ನೂ ನೀಡಲಿಲ್ಲವೆಂಬ ಬೇಸರವನ್ನ ಮೆಗಾಸ್ಟಾರ್ ಚಿರಂಜೀವಿ ವ್ಯಕ್ತಪಡಿಸಿದ್ದಾರೆ.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss