ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಮೈಸೂರು: ಕೋವಿಡ್ ರೂಪಾಂತರದ ತೀವ್ರತೆ ಬಗ್ಗೆ ತಜ್ಞರು ಹೇಳಿದ್ದಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ದನ ತುಂಬಿದಂತೆ ತುಂಬಲಾಗುತ್ತಿದೆ. ಶಿಕ್ಷಣ ಸಚಿವರು ಏನು‌ ಮಾಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಕಡಿಮೆಯಾದರೆ ದೊಡ್ಡ ಅನಾಹುತವಾಗುತ್ತದೆ.

ಇದು ಮಕ್ಕಳ ವಿಚಾರ, ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಹೊಸ ವೈರಸ್ ವೇಗವಾಗಿ ಹರಡುತ್ತಿದೆ. ಇದರಿಂದ ಮಕ್ಕಳಿಗೆ ಅನಾಹುತವಾಗದಂತೆ ಎಚ್ಚರ ವಹಿಸಬೇಕು. 7ನೇ ತರಗತಿಯವರೆಗಿನ ಮಕ್ಕಳಿಗೆ ಮನೆಯಲ್ಲೇ ಪಾಠ ಆಗಬೇಕು. ಮೊದಲ ರ್ಯಾಂಕ್ ಬರುವವರು ಶಾಲೆಯಿಂದ ಕಲಿತು ಬರುವುದಿಲ್ಲ. ಅವಸರದಲ್ಲಿ ಶಾಲಾ ಕಾಲೇಜುಗಳ ಬಗ್ಗೆ ನಿರ್ಧಾರ ಬೇಡ, ಸರ್ಕಾರ ಈ‌ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಎಂದು ಮೈಸೂರಿನಲ್ಲಿ ಎಚ್ ವಿಶ್ವನಾಥ್ ಹೇಳಿದರು.

About The Author