ಇಂದಿನಿಂದ ಕ್ರಿಕೆಟ್ ಮಹಾ ಸಮರ ಆರಂಭವಾಗುತ್ತಿದೆ. ನಾಲ್ಕು ವರ್ಷಗಳ ನಂತರ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹತ್ತು ತಂಡಗಳು ಸೆಣಸುತ್ತಿದ್ದು, ಕಪ್ ಗೆಲ್ಲುವ ರೇಸ್ ನಲ್ಲಿ ಘಟಾನುಘಟಿಗಳ ದೊಡ್ಡ ಪಟ್ಟಿಯೇ ಇದೆ. ಇಂದಿನಿಂದ ಆರಂಭವಾಗಲಿರುವ ವಿಶ್ವಕಪ್ ಮಹಾ ಸಮರಕ್ಕೆ ಜುಲೈ 14ರಂದು ತೆರೆ ಬೀಳಲಿದೆ.
ಒಟ್ಟು 48 ಪಂದ್ಯಗಳು ನಡೆಯುತ್ತಿದ್ದು ಈ ಮಹಾ ಸಮರಕ್ಕಾಗಿ ಇಂಗ್ಲೆಂಡ್ ಮತ್ತು ವೆಲ್ಸ್ ನ 11 ಮೈದಾನ ಗಳು ಸಜ್ಜಾಗಿವೆ. ಇನ್ನೂ 1999ರ ವಿಶ್ವ ಕಪ್ ಟೂರ್ನಿ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಈ ಮೂಲಕ ಒಟ್ಟು 5ನೇ ಬಾರಿ ಮಹಾ ಟೂರ್ನಿಯನ್ನು ನಡೆಸಿಕೊಟ್ಟ ಕೀರ್ತಿ ಇಂಗ್ಲೆಂಡ್ ನದ್ದು.
ನಿನ್ನೆ ಲಂಡನ್ ನಲ್ಲಿ ವಿಶ್ವಕಪ್ ಟೂರ್ನಿಯ ಅದ್ದೂರಿ ಉದ್ಘಾಟನೆ ನಡೆದು ಸಮಾರಂಭದ ನಂತರ ಲಂಡನ್ ನ ಬಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಆಟಗಾರರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಜೊತೆಗೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರೊಂದಿಗೆ ಎಲ್ಲ ಹತ್ತು ತಂಡದ ನಾಯಕರು ಫೋಟೋಗೆ ಪೋಸ್ ನೀಡಿದ್ರು. ಒಟ್ಟಾರೆ 12ನೇ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಸೆಣಸುತ್ತಿದ್ದು, ಇದೇ ಮೊದಲ ಬಾರಿಗೆ ಭಾಗವಹಿಸಿರುವ ಎಲ್ಲಾ ತಂಡಗಳು ಟೆಸ್ಟ್ ಆಡುವ ಮಾನ್ಯತೆ ಪಡೆದಿದ್ದು ವಿಶೇಷ.
ಬಿಜೆಪಿ ಜೊತೆ ಕೈಜೋಡಿಸಲಿದ್ಯಾ ಜೆಡಿಎಸ್…?ತಪ್ಪದೇ ಈ ವಿಡಿಯೋ ನೋಡಿ.