Friday, July 11, 2025

Latest Posts

INDIAದಲ್ಲಿ ಇಂದು 1,94,720 ಕೋವಿಡ್ ಪ್ರಕರಣ ಪತ್ತೆ..!

- Advertisement -


ದೆಹಲಿ : ಭಾರತದಲ್ಲಿ ಇಂದು 24 ಗಂಟೆಗಳಲ್ಲಿ 1,94,720 ಕೋವಿಡ್ ಪ್ರಕರಣಗಳು(Covid Cases)ಪತ್ತೆಯಾಗಿವೆ. ನಿನ್ನೆ 1.68 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆಗಿಂತ ಶೇಕಡ 15.9 ರಷ್ಟು ಹೆಚ್ಚಾಗಿದೆ. 100 ಜನರ ಕೊರೋನಾ ಪರೀಕ್ಷೆಯಲ್ಲಿ ಶೇಕಡ 11.5 ರಷ್ಟು ಕೊರೋನಾ ಸೋಂಕು ದೃಡಪಟ್ಟಿರುವುದು ಪತ್ತೆಯಾಗಿದೆ. ಇನ್ನೂ ದೇಶದಲ್ಲಿ ಒಮಿಕ್ರಾನ್(Omicron)ಪ್ರಕರಣಗಳು 4868ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ(Maharashtra)ದಲ್ಲಿ 1281 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದು , ರಾಜಸ್ಥಾನ(Rajasthan)ದಲ್ಲಿ 645 ಪ್ರಕರಣಗಳು ಪತ್ತೆಯಾಗಿವೆ. ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾದಿಂದ 165 ಜನ ಮರಣ ಹೊಂದಿದ್ದಾರೆ. 29 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿ 120 ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣದಲ್ಲಿ ಶೇಕಡಾ 10ರಷ್ಟು ಏರಿಕೆಯ ದರ ವರದಿಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೆ ಕೋವಿಡ್ ಪಾಸಿಟಿವ್ ಬಂದಿರುವುದು ದೃಡವಾಗಿದೆ. ಇವರಿಗೆ 2020 ಸೆಪ್ಟೆಂಬರ್‌ನಲ್ಲಿ ಕೊರೋನಾ ಸೋಂಕು ದೃಡವಾಗಿತ್ತು. ಈಗ ಇವರಿಗೆ ಮತ್ತೊಮ್ಮೆ ಸೋಂಕು ದೃಡಪಟ್ಟಿದ್ದು, ಕಡಿಮೆ ಪ್ರಮಾಣದ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು ಮನೆಯಲ್ಲಿಯೇ ಹೋಂ ಐಸೋಲೇಷನ್(Home Isolation)ಆಗಿರುವುದಾಗಿ ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಕೇಂದ್ರ ರಕ್ಷಾಣ ಸಚಿವ ರಾಜ್‌ನಾಥ್ ಸಿಂಗ್(Union Defense Minister Rajnath Singh), ಜೆ.ಪಿ ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವು ನಾಯಕರಿಗೆ ಕೊರೋನಾ ದೃಡಪಟ್ಟಿರುವುದು ಕಂಡುಬಂದಿದ್ದು ,ಮನೆಯಲ್ಲಿಯೇ ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest Posts

Don't Miss