Friday, February 7, 2025

Latest Posts

20ಸಾವಿರ ಬಂಡವಾಳ ಹೂಡಿ ಶುರು ಮಾಡಬಹುದಾದ 10 ವಿಧದ ಲಾಭದಾಯಕ ಸಣ್ಣ ಉದ್ಯಮ…

- Advertisement -

ಯಾವುದೇ ಉದ್ಯಮ ಶುರುಮಾಡುವಾಗ ಸಣ್ಣ ಹೆದರಿಕೆ ಇದ್ದೇ ಇರತ್ತೆ. ಇಷ್ಟು ಬಂಡವಾಳ ಹಾಕಿ ಲಾಭ ಬರದಿದ್ದರೆ ಏನು ಮಾಡೋದು..? ಉದ್ಯಮ ಶುರು ಮಾಡಿದ್ರೆ ಲಾಭ ಬರತ್ತಲ್ವಾ..? ಉದ್ಯಮವನ್ನ ಪ್ರಮೋಟ್ ಮಾಡೋಕ್ಕೆ ಏನೆಲ್ಲಾ ಮಾಡ್ಬೇಕು..? ಹೀಗೆ ಸಾಲು ಸಾಲು ಪ್ರಶ್ನೆಗಳು ನಮ್ಮ ತಲೆಯಲ್ಲಿ ಮೂಡುತ್ತೆ.

ಇಂಥ ಪ್ರಶ್ನೆಗೆ ಸಿಂಪಲ್ ಆಗಿ ನಾವು ಉತ್ತರ ಕೊಡುವ ಪ್ರಯತ್ನ ಮಾಡಿದ್ದೇವೆ. 20 ಸಾವಿರ ರೂಪಾಯಿಯಿಂದ ಒಂದು ಲಕ್ಷದವರೆಗೆ ಬಂಡವಾಳ ಹೂಡಿ 10 ತರಹದ ಸಣ್ಣ ಉದ್ಯಮ ಶುರು ಮಾಡುವುದು ಹೇಗೆ ಅನ್ನೋದನ್ನ ನಾವಿವತ್ತು ಹೇಳ್ತೇವೆ.

ಕ್ಯಾಂಡಲ್ಸ್ ಉದ್ಯಮ: ಒಳ್ಳೆಯ ಲಾಭ ಬೇಕಂದ್ರೆ ಕ್ಯಾಂಡಲ್‌ ಉದ್ಯಮ ಶುರು ಮಾಡುವುದು ಉತ್ತಮ. ಸೆಲೆಬ್ರಿಟಿಗಳು ಕೂಡ ಈ ಉದ್ಯಮದಲ್ಲಿ ಲಾಭ ಕಂಡಿದ್ದಾರೆ. ಪಾರ್ಟಿ, ಫಂಕ್ಷನ್, ಸ್ಟಾರ್ ಹೊಟೇಲ್‌ಗಳಲ್ಲಿ ಕ್ಯಾಂಡಲ್‌ಗಳನ್ನ ಹೆಚ್ಚಾಗಿ ಖರೀದಿ ಮಾಡ್ತಾರೆ. ಅದರಲ್ಲೂ ಪರ್ಫ್ಯೂಮ್ ಕ್ಯಾಂಡಲ್‌ಗೆ ಭಾರೀ ಬೇಡಿಕೆ ಇದೆ.

ಈ ಉದ್ಯಮ ಶುರು ಮಾಡಿದ್ರೆ ವ್ಯಾಕ್ಸ್, ಪರ್ಫ್ಯೂಮ್ ಎಣ್ಣೆ, ಬತ್ತಿ, ಥರ್ಮಾಮೀಟರ್, ಪಾಟ್ ಇನ್ನಿತರೇ ವಸ್ತುಗಳನ್ನ ಬಳಸಬೇಕಾಗುತ್ತದೆ. ಇದೆಲ್ಲದೇ 20ರಿಂದ 30 ಸಾವಿರ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ.

ಉಪ್ಪಿನಕಾಯಿ ವ್ಯಾಪಾರ: ಮನೆಯಲ್ಲೇ ಉಪ್ಪಿನಕಾಯಿಯನ್ನ ತಯಾರಿಸಿ ಮಾರಾಟ ಮಾಡುವುದರಿಂದಲೂ ಲಾಭವಿದೆ. 20ರಿಂದ 25 ಸಾವಿರ ರೂಪಾಯಿ ಬಂಡವಾಳ ಹಾಕಿ ಈ ಉದ್ಯಮ ಶುರುಮಾಡಬಹುದು. ಭಾರತದಲ್ಲಷ್ಟೇ ಅಲ್ಲದೇ, ವಿದೇಶದಲ್ಲಿ ಉಪ್ಪಿನಕಾಯಿಗೆ ಭಾರೀ ಡಿಮ್ಯಾಂಡ್ ಇದೆ. ಮಾವಿನಕಾಯಿ, ನಿಂಬೆಹಣ್ಣು, ಬೆಳ್ಳುಳ್ಳಿ, ತರಕಾರಿ ಮಿಶ್ರಣದ ಉಪ್ಪಿನಕಾಯಿ ಹೀಗೆ ಹಲವು ತರಹದ ಉಪ್ಪಿನಕಾಯಿ ತಯಾರಿಸಬಹುದು.

ಊದುಬತ್ತಿ: ಭಾರತದಲ್ಲಿ ಪೂಜೆ ಪುನಸ್ಕಾರ ಸಂದರ್ಭದಲ್ಲಿ ಮೊದಲ ಆದ್ಯತೆ ಪಡೆಯುವುದು ಊದುಬತ್ತಿ. ವಿದೇಶದಲ್ಲೂ ಊದುಬತ್ತಿಗೆ ಬೇಡಿಕೆ ಇದೆ. ಧ್ಯಾನಕೇಂದ್ರದಲ್ಲಿ ಊದುಬತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಹಬ್ಬದ ಸಂದರ್ಭದಲ್ಲಿ ಇದರ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. 50 ಸಾವಿರ ಬಂಡವಾಳ ಹೂಡಿ ಈ ಉದ್ಯಮ ಶುರುಮಾಡಬಹುದು.

ಬಟನ್ಸ್: 30ರಿಂದ 40 ಸಾವಿರ ಬಂಡವಾಳ ಹೂಡಿ ಬಟನ್ಸ್ ಉದ್ಯಮ ಮಾಡಬಹುದು. ಪ್ರಪಂಚದಾದ್ಯಂತ ಬಟನ್ಸ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಬಟ್ಟೆ ಸ್ಟಿಚ್ ಮಾಡುವಾಗ ಬಟನ್ ಅವಶ್ಯಕತೆ ಇದ್ದೇ ಇರುತ್ತದೆ. ಫ್ಯಾಬ್ರಿಕ್, ಪ್ಲಾಸ್ಟಿಕ್, ಸ್ಟೀಲ್‌ ಹೀಗೆ ಹಲವು ತರಹದ ಬಟನ್ ತಯಾರಿಸಬಹುದು.

ಲೇಸ್: ಗಾರ್ಮೆಂಟ್ಸ್‌ಗಳಲ್ಲಿ, ಕ್ರಾಫ್ಟ್ ಮಾಡುವಾಗ ಲೇಸ್ ಬಳಕೆ ಮಾಡಲಾಗುತ್ತದೆ. ಮನೆಯಲ್ಲಿದ್ದುಕೊಂಡೇ ಈ ಉದ್ಯಮ ಶುರುಮಾಡಬಹುದಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಲರ್ ಕಲರ್ ಲೇಸ್ ಕ್ರಾಫ್ಟ್ ಇರುವ ಬಟ್ಟೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. 25ರಿಂದ 50 ಸಾವಿರದವರೆಗೆ ಬಂಡವಾಳ ಹೂಡಿ ಈ ಉದ್ಯಮ ಶುರು ಮಾಡಬಹುದು.

https://youtu.be/19Ira7H9uBU

ತೆಂಗಿನಎಣ್ಣೆ: ಹಲವು ಆರೋಗ್ಯಕರ ಗುಣಗಳನ್ನು ಹೊಂದಿರುವ ತೆಂಗಿನಎಣ್ಣೆ ಉದ್ಯಮ ಶುರುಮಾಡಲು ಒಂದು ಲಕ್ಷ ಬಂಡವಾಳ ಹೂಡಬೇಕಾಗುತ್ತದೆ. ಆರೋಗ್ಯವರ್ಧಕ, ಸೌಂದರ್ಯವರ್ಧಕವೂ ಆಗಿರುವ ತೆಂಗಿನಎಣ್ಣೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಐಸ್‌ಕ್ರೀಮ್ ಕೋನ್ಸ್: ಐಸ್‌ಕ್ರೀಮ್… ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಇಷ್ಟವಾಗುವಂಥ ಡೆಸರ್ಟ್ ಅಂದ್ರೆ ಐಸ್‌ಕ್ರೀಮ್. ಅದರಲ್ಲೂ ಕೋನ್‌ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಫೇವರೇಟ್. ಆ ಕೋನ್ ಐಸ್‌ಕ್ರೀಮ್‌ಗೆ ಬಳಸೋ ಕೋನ್ ತಯಾರಿಸಿ ಮಾರಬಹುದು.ಈ ಉದ್ಯಮಕ್ಕೆ ನೀವು ಒಂದು ಲಕ್ಷದ ತನಕ ಬಂಡವಾಳ ಹೂಡಬೇಕಾಗುತ್ತದೆ. ಉತ್ತಮವಾಗಿ ಬ್ಯುಸಿನೆಸ್ ಮುಂದುವರಿಸಿದರೆ ಲಾಭ ಕಟ್ಟಿಟ್ಟಬುತ್ತಿ.

ಚಾಕೋಲೇಟ್ಸ್: 40ರಿಂದ 50 ಸಾವಿರ ಬಂಡವಾಳ ಹೂಡಿ, ಚಾಕೋಲೇಟ್ಸ್ ಬ್ಯುಸಿನೆಸ್ ಮಾಡಬಹುದು. ಈ ಲಾಭದಾಯಕ ಅವಕಾಶ ಬಳಸಿಕೊಂಡ್ರೆ, ಮನೆಯಲ್ಲೇ ಕೂತು ವೆರೈಟಿ ವೆರೈಟಿ ಚಾಕೋಲೇಟ್ಸ್ ತಯಾರಿಸಬಹುದು.

ಹಪ್ಪಳ: ಮೊದಲಿನಿಂದಲೂ ಸಣ್ಣ ಉದ್ಯಮ ಎಂಬ ಹೆಸರು ಕೇಳಿದಾಗ ನೆನಪಿಗೆ ಬರುವ ಹೆಸರು ಹಪ್ಪಳ. ಹಲವರು ಮನೆಯಲ್ಲೇ ಹಪ್ಪಳ ತಯಾರಿಸಿ ಮಾರಾಟ ಮಾಡಿ, ಲಾಭ ಮಾಡಿದವರಿದ್ದಾರೆ. ಮದುವೆ ಮನೆ, ಹಬ್ಬಹರಿದಿನ, ಹೀಗೆ ಹಲವು ಕಾರ್ಯಕ್ರಮದಲ್ಲಿ ಹಪ್ಪಳಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. 30ರಿಂದ 40 ಸಾವಿರ ರೂಪಾಯಿ ಆದಾಯ ಹೂಡಿ ಹಪ್ಪಳದ ಉದ್ಯಮ ಶುರುಮಾಡಬಹುದು.

ಶ್ಯಾವಿಗೆ: ಕಡಿಮೆ ದರದಲ್ಲಿ ಉದ್ಯಮ ಮಾಡುವುದಾದರೆ 40ಸಾವಿರ, ಹೆಚ್ಚಿನ ದರದ ಮಷಿನ್ ಬಳಸಿ ಉದ್ಯಮ ಮಾಡುವುದಾದರೆ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿ, ಶ್ಯಾವಿಗೆ ಉದ್ಯಮ ಮಾಡಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/7GStfT4rX2k

ಲೋನ್ ಅಪ್ಲೈ ಮಾಡೋದು ಹೇಗೆ..? ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯೋದು ಹೀಗೆ..? ಯಾವ ಬ್ಯಾಂಕ್ ಸೇಫ್ ಅಲ್ಲ..? ಎಲ್ಲಾ ರೀತಿಯ ಹಣಕಾಸಿನ ಮಾಹಿತಿಗಾಗಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://indianmoney.com/ffc

- Advertisement -

Latest Posts

Don't Miss