Friday, July 4, 2025

Latest Posts

ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..

- Advertisement -

ಆಫೀಸ್ ಎಂದ ಮೇಲೆ ಅಲ್ಲಿ ಕೆಲವರ ನಡುವೆ ಒಂಚೂರು ಕೊಂಕು ಮಾತು, ಹೊಟ್ಟೆಕಿಚ್ಚು, ಕೋಪ ತಾಪ ಎಲ್ಲವೂ ಇರುತ್ತದೆ. ಆದ್ರೆ ಆ ಕೋಪ ತಾಪ, ಹೊಟ್ಟೆಕಿಚ್ಚೆಲ್ಲ, ಮನಸ್ಸಿನಲ್ಲೇ ಇದ್ದರೆ ಒಳ್ಳೆಯದು. ಆದ್ರೆ ಅದನ್ನು ಹೊರಗೆ ತೋರಿಸಿಕೊಂಡ್ರೆ, ಆ ಕೋಪ ತಾಪ ಹೆಚ್ಚಾಗಿ ಬಿಟ್ರೆ, ಪ್ರಾಣ ಹಾನಿಯೂ ಆಗಬಹುದು ಎನ್ನುವುದಕ್ಕೆ, ಗುರುಗ್ರಾಮದಲ್ಲಿ ನಡೆದ ಈ ಘಟನೆಯೇ ಉದಾಹರಣೆ.

ಗುರುಗ್ರಾಮದ ಕಚೇರಿಯೊಂದರಲ್ಲಿ ಕುರ್ಚಿಯ ವಿಷಯಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದು, ಈ ಜಗಳ ವಿಕೋಪಕ್ಕೇರಿ, ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಗೆ ಗುಂಡಿಕ್ಕಿದ್ದಾನೆ. ದಾಳಿಗೊಳಗಾದ ವ್ಯಕ್ತಿ ವಿಶಾಲ್ (23) ಎಂದು ಗುರುತಿಸಲಾಗಿದ್ದು, ಫಿರೋಜ್ ಗಾಂಧಿ ಕಾಲೋನಿಯವನಾಗಿದ್ದಾನೆ. ದಾಳಿಗೊಳಗಾದ ವಿಶಾಲ್‌ನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ವಿಷಯ ತಿಳಿದ ವಿಶಾಲ್‌ನ ಸಹೋದರ, ದಾಳಿ ಮಾಡಿದ ವ್ಯಕ್ತಿ ವಿರುದ್ಧ ಕೇಸ್ ಫೈಲ್ ಮಾಡಿದ್ದಾರೆ.

ವಿಷಯ ಏನಂದ್ರೆ, ವಿಶಾಲ್ ತನ್ನ ಸಹೋದ್ಯೋಗಿ ಅಮನ್ ಜೊತೆ ಮಂಗಳವಾರದ ದಿನ ಕುರ್ಚಿಯ ವಿಷಯವಾಗಿ, ಜಗಳವಾಡಿದ್ದ. ಬುಧವಾರ ಮತ್ತೆ ಆ ಜಗಳ ಮುಂದುವರಿದಿದೆ. ಈ ವೇಳೆ ಜಗಳವಾಡಿದ ವಿಶಾಲ್ ಆಫೀಸಿನಿಂದ ಹೊರ ನಡೆದಿದ್ದಾರೆ. ವಿಶಾಲ್ ಹೇಳುವ ಪ್ರಕಾರ, ತಾನು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅಮನ್ ಹಿಂದಿನಿಂದ ಬಂದು ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿರುವ ಸ್ಥಳೀಯ ಪೊಲೀಸರು, ಸದ್ಯದಲ್ಲೇ ಆರೋಪಿಯನ್ನ ಹುಡುಕಿ ಬಂಧಿಸುವುದಾಗಿ, ಭರವಸೆ ನೀಡಿದ್ದಾರೆ.

ಚೆಕ್ ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಹೆಚ್.ಡಿ.ಕುಮಾರಸ್ವಾಮಿ

ಕೊಹ್ಲಿ ತಮ್ಮ 10th ಮಾರ್ಕ್ಸ್ ಕಾರ್ಡ್ ಶೇರ್ ಮಾಡಿ ಹೇಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೋಡಿ..

ಹಾಸನದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದ ಕಾರಣ, ಚುನಾವಣೆ ಬಹಿಷ್ಕಾರ ನಿರ್ಧಾರ..

- Advertisement -

Latest Posts

Don't Miss