Wednesday, June 12, 2024

Latest Posts

ಸೇತುವೆ ಮೇಲಿಂದ ರಾಜಕಾಲುವೆಗೆ ಬಿದ್ದ ಬಸ್- 29 ಮಂದಿ ಸ್ಥಳದಲ್ಲೇ ಸಾವು..!

- Advertisement -

ಉತ್ತರಪ್ರದೇಶ: ಸೇತುವೆ ಮೇಲಿನಿಂದ ರಾಜಕಾಲುವೆಗೆ ಬಸ್ ಉರುಳಿಬಿದ್ದ ಪರಿಣಾಮ 29 ಮಂದಿ ಪ್ರಯಾಣಿಕರು ಸಾವನ್ನಪ್ಪಿ 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯೊಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಲಖ್ನೌನಿಂದ ದೆಹಲಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಇಟ್ಮಾಡ್ಪುರ್ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ರಾಜಕಾಲುವೆಗೆ ಬಿದ್ದುಬಿಟ್ಟಿದೆ. ಪರಿಣಾಮ ಬಸ್ ನಲ್ಲಿದ್ದ 50 ಮಂದಿ ಪ್ರಯಾಣಿಕರ ಪೈಕಿ 29 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಬಸ್ ಚಾಲಕ ನಿದ್ರೆಯ ಮಂಪರಿಗೆ ಜಾರಿದ್ದೇ ಘಟನೆಗೆ ಕಾರಣ ಎನ್ನಲಾಗ್ತಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಅಲ್ಲದೆ ಘಟನೆ ಕುರಿತಾಗಿ ತನಿಖೆಗೆ ಆದೇಶಿಸಿದ್ದಾರೆ.

ಉತ್ತಪ್ರದೇಶದಲ್ಲಿ ಸಿಎಂ ಯೋಗಿಆದಿತ್ಯನಾಥ್ ಖಡಕ್ ಆದೇಶ..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Z81OnyFBrPI
- Advertisement -

Latest Posts

Don't Miss