Political News: ನಾನು ಮೋದಿ ವಿರೋಧಿ ಎಂಬ ಕಾರಣಕ್ಕೆ ನನಗೆ ಲೋಕಸಭೆ ಚುನಾವಣೆಗಾಗಿ, ಮೂರು ಪಕ್ಷದವರು ಟಿಕೇಟ್ ಕೊಡಲು ಮುಂದಾಗಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್, ನಾನು ಮೋದಿ ವಿರೋಧಿ, ಅವರ ವಿರುದ್ಧ ಸದಾ ವಾಗ್ದಾಳಿ ಮಾಡುತ್ತಿರುತ್ತೇನ ಎಂಬ ಕಾರಣಕ್ಕಾಗಿ, ನನಗೆ ಲೋಕಸಭೆ ಚುನಾವಣೆಗಾಗಿ ಮೂರು ಪಕ್ಷಗಳು ಟಿಕೇಟ್ ನೀಡಲು ಮುಂದಾಗಿದ್ದವು. ಆದರೆ ನಾನು ಯಾರ ರಾಜಕೀಯ ಬಲೆಗೂ ಬೀಳಲಿಲ್ಲ. ಹಾಗಾಗಿ ನಾನು ನನ್ನ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದೇನೆ. ಏಕೆಂದರೆ, ಅವರು ನನಗೆ ನಾನು ಉತ್ತಮ ಸ್ಪರ್ಧಿ, ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಟಿಕೇಟ್ ನೀಡುತ್ತಿಲ್ಲ. ಬದಲಾಗಿ ನಾನು ಮೋದಿಯ ಪ್ರಬಲ ಟೀಕಾಕಾರ ಎಂಬ ಕಾರಣಕ್ಕ ಟಿಕೇಟ್ ನೀಡುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.
ಅಲ್ಲದೇ, ಇದೇ ವೇಳೆ ಮಾತನಾಡಿದ ಪ್ರಕಾಶ್ ರಾಜ್, ನಾನು ಖಂಡಿತವಾಗಿಯೂ ಮೋದಿ ವಿರೋಧಿಯಲ್ಲ. ನಾನು ಪ್ರಧಾನಿ ಸ್ಥಾನದಲ್ಲಿ ಯಾರೇ ಇದ್ದರೂ, ಅವರಿಗೆ ಇದೇ ರೀತಿ ಪ್ರಶ್ನಿಸುತ್ತೇನೆ. ಮುಂದೆ ಮೋದಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದು, ಆ ಸ್ಥಳದಲ್ಲಿ ಯಾರೇ ಬಂದರೂ, ಅವರಿಗೂ ನಾನು ಇದೇ ರೀತಿ ಪ್ರಶ್ನಿಸುತ್ತೇನೆ. ಏಕೆಂದರೆ, ಅವರು ನಮ್ಮ ಪ್ರಧಾನಿಗಳು, ನಾನು ಓಟ್ ಹಾಕಲಿ, ಬಿಡಲಿ ಅವರು ನಮಗೂ ಪ್ರಧಾನಿಗಳೇ. ಹಾಗಾಗಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಲು ಎಲ್ಲರಿಗೂ ಹಕ್ಕಿದೆ. ನಾನು ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತೇನೆ ಬಿಟ್ಟರೆ ನಾನು ಮೋದಿ ವಿರೋಧಿಯಲ್ಲಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ
ಪಂಚೆ-ಶಲ್ಯ ಧರಿಸಿ ಪೊಂಗಲ್ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್