National News: ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕರ್ನಾಟದಲ್ಲಿ, ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ ಆಚರಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಪೊಂಗಲ್ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಬಿಹು, ಲೋರಿ ಹೀಗೆ ಭಾರತದ ಹಲವು ಕಡೆ ಸಂಕ್ರಾಂತಿಯನ್ನು ಬೇರೆ ಬೇರೆ ಹೆಸರಿನಲ್ಲಿ ಕರೆದು, ಹಬ್ಬವನ್ನು ಆಚರಿಸಲಾಗುತ್ತದೆ.
ಅದರಂತೆ ಪೂಜೆ, ಹಬ್ಬ ಆಚರಿಸುವ ಪದ್ಧತಿ ಕೂಡ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಖುಷಿ ಕೊಡಬೇಕಾದ ಪದ್ಧತಿ. ಮಗುವಿನ ಜೀವ ತೆಗೆದಿದೆ. ಉತ್ತರಭಾರತೀಯರು ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿ, ಖುಷಿ ಪಡುತ್ತಾರೆ. ಆದರೆ ಇಲ್ಲಿ ಗಾಳಿ ಪಟ ಹಾರಿಸುವ ವೇಳೆ ಅದಕ್ಕೆ ಬಳಸುವ ದಾರ ಕುತ್ತಿಗೆಗೆ ತಾಕಿ, ಮಗುವಿನ ಜೀವವೇ ಹೋಗಿದೆ.
ಮಧ್ಯಪ್ರದೇಶದ ಧಾರ್ ನಗರದಲ್ಲಿ, ವಿನೋದ್ ಚೌಹಾಣ್ ಎಂಬುವವರು, ತಮ್ಮ 7 ವರ್ಷದ ಬಾಲಕನನ್ನು ಕರೆದುಕೊಂಡು ಮೋಟರ್ ಸೈಕ್‌ನಲ್ಲಿ ತೆರಳುತ್ತಿದ್ದರು. ಆಗ ಯಾರೋ ಹಾರಿಸುತ್ತಿದ್ದ ಗಾಳಿಪಟದ ದಾರ, ಮಗುವಿನ ಕುತ್ತಿಗೆಗೆ ತಾಕಿದೆ. ಇದು ಹರಿತವಾಗಿದ್ದ ಕಾರಣ, ಮಗುವಿನ ಗಂಟಲು ಸೀಳಿದೆ. ಆಗ ಸ್ಥಳದಲ್ಲೇ ಇದ್ದ ಆಸ್ಪತ್ರೆಗೆ ಮಗುವನ್ನು ಸೇರಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದ ಕಾರಣ, ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಬೇಕೆಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗುವಾಗ, ಮಗು ಮಾರ್ಗಮಧ್ಯೆ ಸಾವನ್ನಪ್ಪಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಬಳಿಕ ಕ್ರಮಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ವಿಹೆಚ್‌ಪಿಯಿಂದ ಅಮಿತ್ ಷಾಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ
ಪಂಚೆ-ಶಲ್ಯ ಧರಿಸಿ ಪೊಂಗಲ್ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್