Friday, March 14, 2025

Latest Posts

30 ಕಲಾವಿದರಿಗೆ 2021 ನೇ ಸಾಲಿನ ಜನಪದ ಅಕಾಡೆಮಿ ಪ್ರಶಸ್ತಿ ಮತ್ತು ಇಬ್ಬರಿಗೆ ತಜ್ಞ ಪ್ರಶಸ್ತಿ ಲಭಿಸಿದೆ.

- Advertisement -

ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2021ನೇ ಸಾಲಿನ ಜಾನಪದ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದೆ.

ನೀಲಗಾರರ ಪದಗಳ ಖ್ಯಾತಿಯ ಮಳವಳ್ಳಿ ಮಹಾದೇವಸ್ವಾಮಿ ಸೇರಿ ಒಟ್ಟು 30 ಹಿರಿಯ ಜಾನಪದ ಕಲಾವಿದರು 2021ನೇ ಸಾಲಿನ “ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಇಬ್ಬರು ಜಾನಪದ ವಿದ್ವಾಂಸರಿಗೆ ‘ತಜ್ಞ ಪ್ರಶಸ್ತಿ’ ನೀಡಲಾಗಿದೆ.

ಬೆಂಗಳೂರಿನ ಕನ್ನಡ ಭವನದಲ್ಲಿರುವ ಕರ್ನಾಟಕ ಜಾನಪದ ಅಕಾಡೆಮಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರು ಪ್ರಶಸ್ತಿ ಪ್ರಕಟಿಸಿದರು. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ಹಾಗೂ ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು ಹಾಗೂ ಸ್ಮರಣಿಕೆ, ಶಾಲು, ಹಾರ, ಫಲ-ತಾಂಬೂಲಗಳನ್ನು ನೀಡಿ ಗೌರವಿಸಲಾಗುತ್ತದೆ.

  • ಜಾನಪದ ಅಕಾಡೆಮಿ ಪ್ರಶಸ್ತಿ ಭಾಜನರಾದವರು
  1. ಗಂಗಮ್ಮ, ಸೋಬಾನೆ ಪದ , ಬೆಂಗಳೂರು ನಗರ ಜಿಲ್ಲೆ.
  2. ತಿಮ್ಮಯ್ಯ, ಜಾನಪದ ಕಥೆಗಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
  3. ಚಿಕ್ಕಮ್ಮ, ಸೋಬಾನೆ ಪದ, ರಾಮನಗರ ಜಿಲ್ಲೆ.
  4. ಕಡಬ ಶ್ರೀನಿವಾಸ, ಜಾನಪದ ಹಾಸ್ಯ ಜಾದೂಗಾರ, ತುಮಕೂರು ಜಿಲ್ಲೆ.
  5. ಗ.ನ. ಅಶ್ವತ್ಥ, ಜಾನಪದ ಗಾಯಕ, ಚಿಕ್ಕಬಳ್ಳಾಪುರ ಜಿಲ್ಲೆ.
  6. ನಾರಾಯಣಸ್ವಾಮಿ, ತತ್ವಪದ, ಕೋಲಾರ ಜಿಲ್ಲೆ.
  7. ಲಕ್ಷ್ಮೇರಾಮಪ್ಪ, ಹಸೆ ಚಿತ್ತಾರ, ಶಿವಮೊಗ್ಗ ಜಿಲ್ಲೆ.
  8. ಚಂದ್ರಮ್ಮ, ಮದುವೆ ಹಾಡು, ಚಿತ್ರದುರ್ಗ ಜಿಲ್ಲೆ.
  9. ರಂಗಮ್ಮ ಗಂಡ ಗಿಡ್ಡಪ್ಪ, ಜಾನಪದ ಗಾಯಕಿ, ದಾವಣಗೆರೆ ಜಿಲ್ಲೆ.
  10. ಮಹಾದೇವಸ್ವಾಮಿ, ನೀಲಗಾರರ ಪದ, ಮಂಡ್ಯ ಜಿಲ್ಲೆ.
  11. ಮಹಾದೇವು, ಬೀಸು ಕಂಸಾಳೆ, ಮೈಸೂರು ಜಿಲ್ಲೆ.
  12. ಎಚ್‌.ಎನ್‌. ರಾಮಯ್ಯ, ಕೀಲುಕುದುರೆ, ಹಾಸನ ಜಿಲ್ಲೆ.
  13. ವೆಂಕಟೇಶ ಬಂಗೇರ, ಕರಗ ನೃತ್ಯ, ದಕ್ಷಿಣ ಕನ್ನಡ ಜಿಲ್ಲೆ.
  14. ಆರ್‌.ಎಂ. ಶಿವಮಲ್ಲೇಗೌಡ, ಗೊರವರ ಕುಣಿತ, ಚಾಮರಾಜನಗರ ಜಿಲ್ಲೆ.
  15. ಹನುಮಕ್ಕ (ದೃಷ್ಟಿ ವಿಶೇಷ ಚೇತನ), ತತ್ವಪದ, ಚಿಕ್ಕಮಗಳೂರು ಜಿಲ್ಲೆ.
  16. ಜೆ.ಕೆ. ಮರಿ, ಜೇನು ಕುರುಬರ ನೃತ್ಯ ಮತ್ತು ಹಾಡು, ಕೊಡಗು ಜಿಲ್ಲೆ.
  17. ಪದ್ಮಾವತಿ ಆಚಾರ್ಯ, ನಾಟಿ ವೈದ್ಯೆ, ಉಡುಪಿ ಜಿಲ್ಲೆ.
  18. ಕುಬೇರಗೌಡ ಮುರಳ್ಳಿ, ಜಗ್ಗಲಿಗೆ, ಧಾರವಾಡ ಜಿಲ್ಲೆ.
  19. ರಾಮಚಂದ್ರಪ್ಪ ಸಿದ್ದಪ್ಪ, ಕರಡಿ ಮಜಲು, ಗದಗ ಜಿಲ್ಲೆ.
  20. ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ, ಭಜನೆ, ವಿಜಯಪುರ ಜಿಲ್ಲೆ.
  21. ರಂಗಪ್ಪ ಬಾಲಪ್ಪ ಹಲಕುರ್ಕಿ, ಶಿವಭಜನೆ, ಬಾಗಲಕೋಟೆ ಜಿಲ್ಲೆ.
  22. ಸಿದ್ದಲಿಂಗಪ್ಪ ಚನ್ನಬಸಪ್ಪ ನರೇಗಲ್ಲ, ತತ್ವಪದ, ಹಾವೇರಿ ಜಿಲ್ಲೆ.
  23. ರುದ್ರಾಂಬಿಕಾ ಮಹಾಂತೇಶ ಯಾಳಗಿ, ಲಾವಣಿಪದ, ಬೆಳಗಾವಿ ಜಿಲ್ಲೆ.
  24. ಭೂಗೂ ಧಾಕೂ ಕೊಳಾಪ್ಪೆ ಗೌಳಿವಾಡ, ಹೋಳಿ ಸಿಗ್ಮಾ ಕುಣಿತ, ಉತ್ತರಕನ್ನಡ ಜಿಲ್ಲೆ.
  25. ಪೆದ್ದ ಮಾರೆಕ್ಕ, ಬುರ್ರ ಕಥಾ, ಬಳ್ಳಾರಿ ಜಿಲ್ಲೆ.
  26. ಮರಿಯಪ್ಪ, ಭಜನೆ ಪದ, ರಾಯಚೂರು ಜಿಲ್ಲೆ,
  27. ಶಿವಲಿಂಗಪ್ಪ, ಹಗಲುವೇಷ, ಕೊಪ್ಪಳ ಜಿಲ್ಲೆ.
  28. ಶಕುಂತಲಾ ದೇವಲಾನಾಯಕ, ಗೀಗೀಪದ, ಕಲುಬುರಗಿ ಜಿಲ್ಲೆ.
  29. ಸಿದ್ರಾಮ, ಗೋಂದಳಿ ಪದ, ಬೀದರ್‌ ಜಿಲ್ಲೆ.
  30. ಭೂಮ್ಮಣ್ಣ ಬಸಪ್ಪ ಲಾಠಿ, ಡೊಳ್ಳು ಕುಣಿತ, ಯಾದಗಿರಿ ಜಿಲ್ಲೆ.
  • ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರು
  1. ಡಾ. ಚಂದ್ರು ಕಾಳೇನಹಳ್ಳಿ, ಡಾ.ಜಿ.ಶಂ.ಪ ಪ್ರಶಸ್ತಿ, ಹಾಸನ ಜಿಲ್ಲೆ
  2. ಡಾ. ಶ್ರೀಪಾದ ಶೆಟ್ಟಿ, ಡಾ.ಬಿ.ಎಸ್‌. ಗದ್ದಿಗಿಮಠ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲೆ.

ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಸುದ್ದಿಗೋಷ್ಠಿಯಲ್ಲಿದ್ದರು. ಕೊರೊನಾ ಸೋಂಕು ಹಿನ್ನೆಲೆ ಪ್ರಶಸ್ತಿ ಪ್ರದಾನ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ.

- Advertisement -

Latest Posts

Don't Miss