Sunday, February 9, 2025

Latest Posts

Kasaragodu News: ಪಿಸ್ತಾ ಸಿಪ್ಪೆ ನುಂಗಿ ದುರಂತ ಅಂತ್ಯ ಕಂಡ 2 ವರ್ಷದ ಬಾಲಕ

- Advertisement -

Kasaragodu News: ಕೆಲ ಮಕ್ಕಳು ನಾಣ್ಯ, ಇತ್ಯಾದಿ ನುಂಗಿ ಸಾವನ್ನಪ್ಪಿದ ಘಟನೆ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಆರೋಗ್ಯಕರವಾದ ಡ್ರೈಫ್ರೂಟ್ಸ್ ತಿನ್ನುವ ವೇಳೆ, ಅದರ ಸಿಪ್ಪೆಯನ್ನೇ ನುಂಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರ್ ನಗರದ ನಿವಾಸಿಯಾಗಿರುವ ಅನ್ವರ್ ಮತ್ತು ಮೆಹರೂಫ್ ದಂಪತಿಯ ಮಗ ಅನಸ್ ಸಾವನ್ನಪ್ಪಿರುವ 2 ವರ್ಷದ ಬಾಲಕನಾಗಿದ್ದಾನೆ. ಪಿಸ್ತಾ ತಿನ್ನುವಾಗ ಸಿಪ್ಪೆ ತೆಗೆಯದೇ ಹಾಗೆ ನೀಡಿದ್ದು, ಮಗು ಇಡೀ ಪಿಸ್ತಾವನ್ನೇ ಬಾಯಿಗೆ ಹಾಕಿದೆ. ಈ ವೇಳೆ ತಂದೆ ತಾಯಿ ಸಿಪ್ಪೆಯ ಒಂದು ಭಾಗವನ್ನು ಹೊರತೆಗೆದಿದ್ದಾರೆ. ಆದರೆ ಇನ್ನೊಂದು ಭಾಗ ಎದೆಯೊಳಗೆ ಸಿಕ್ಕಿಹಾಕಿಕೊಂಡು, ಮಗುವಿಗೆ ಉಸಿರಾಡಲು ತೊಂದರೆಯಾಗಿದೆ.

ಆಸ್ಪತ್ರೆಗೆ ದಾಾಖಲಿಸಿದರೂ ಮಗುವನ್ನು ಬದುಕಿಸಿಕೊಳ್ಳಲಾಗಲಿಲ್ಲ. ಉಸಿರಾಡಲು ತೊಂದರೆಯಾಗಿ, ಕೊನೆಗೆ ಮಗು ಸಾವನ್ನಪ್ಪಿದೆ.

- Advertisement -

Latest Posts

Don't Miss