Ayodhye News: ಅಯೋಧ್ಯೆ: ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಖಾಲಿ ಇರುವ ಅಯೋಧ್ಯೆಯ ರಾಮಮಂದಿರದ ಅರ್ಚಕರ ಹುದ್ದೆಗಳಿಗೆ ಕನಿಷ್ಠ 3,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಮಮಂದಿರ ಅರ್ಚಕರ ಹುದ್ದೆಗೆ 3,000 ಅಭ್ಯರ್ಥಿಗಳ ಅರ್ಜಿಗಳು ಬಂದಿದ್ದು, ಈ ಪೈಕಿ 200 ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ನ ಅಧಿಕಾರಿಗಳು ತಿಳಿಸಿದ್ದಾರೆ. ಆಯ್ಕೆಯಾದ 200 ಅಭ್ಯರ್ಥಿಗಳು ಅಯೋಧ್ಯೆಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಛೇರಿಯಾದ ಕರಸೇವಕ ಪುರಂನಲ್ಲಿ ಸಂದರ್ಶನವನ್ನು ಎದುರಿಸುತ್ತಿದ್ದಾರೆ.
ವೃಂದಾವನದ ಹಿಂದೂ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ ಅವರ ಮೂರು ಸದಸ್ಯರ ಸಮಿತಿ ಮತ್ತು ಅಯೋಧ್ಯೆಯ ಇಬ್ಬರು ಮಹಂತರಾದ ಮಿಥಿಲೇಶ್ ನಂದಿನಿ ಶರಣ್ ಮತ್ತು ಸತ್ಯನಾರಾಯಣ ದಾಸ್ ಅವರು ಸಂದರ್ಶನಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಾನವೀಯತೆ ಮೆರೆದ ಆಟೋ ಚಾಲಕ: ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಮಹಿಳೆಗೆ ವಾಪಾಸ್