Chikkamagulru News: ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಯುವಕರ ಗುಂಪು ಟಿಪ್ಪು ಸುಲ್ತಾನ್ 40 ಅಡಿ ಎತ್ತರದ ಕಟೌಟ್ ಮಾಡಿಸಿದ್ದು, ಇದರ ವೀಡಿಯೋ ಮಾಡಿ, ಪಾಕಿಸ್ತಾನ ಸೈನ್ಯದ ಹಾಡು ಹಾಕಿ, ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆ ಪೋಲೀಸ್ ಇನ್‌ಸ್ಪೆಕ್ಟರ್ ಧನರಾಜ್ ದೂರು ದಾಖಲಿಸಿದ್ದಾರೆ. ಕೋಮುಸೌಹಾರ್ದ ಕದಡುವ ಕಾರಣಕ್ಕಾಗಿಯೇ ಈ ರೀತಿಯಾಗಿ ರೀಲ್ಸ್ ಮಾಡಲಾಗಿದ್ದು, ಈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ. ದೂರಿನನ್ವಯ ಪ್ರಕರಣ ದಾಖಲಾಗಿದೆ.
ಇನ್ನು ತಮ್ಮ ಕ್ಷೇತ್ರದಲ್ಲಿ ನಡೆದ ಈ ಘಟನೆಯ ಬಗ್ಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ? ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಸಂಬಂಧಿತ ಹಾಡನ್ನು ಬಳಸಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಎಸೆದ ಬಹಿರಂಗ ಸವಾಲು ಎಂದು ರವಿ ಕಿಡಿಕಾರಿದ್ದಾರೆ.
ಮುಜಾಹಿದ್ ಬೆಂಬಲಿತ ಹಾಡನ್ನು ಬಳಸಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು. ಸದಾ ಆರ್‌ಎಸ್‌ಎಸ್ ಬೈಯುವುದರಲ್ಲೇ ದಿನ ಕಳೆಯುವ ಗೃಹ ಸಚಿವರು ತುಷ್ಟೀಕರಣ ರಾಜಕಾರಣ ಬಿಟ್ಟು ಸ್ವಲ್ಪ ಇತ್ತ ಕಡೆ ಗಮನ ಹರಿಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿ ಎಂದು ರವಿ ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ?
ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಸಂಬಂಧಿತ ಹಾಡನ್ನು ಬಳಸಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಎಸೆದ ಬಹಿರಂಗ ಸವಾಲು.
ಮುಜಾಹಿದ್ ಬೆಂಬಲಿತ ಹಾಡನ್ನು ಬಳಸಿ, ಆ… pic.twitter.com/hg5xI98kmg
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) August 24, 2026


