ದಲಿತರ ಹಣ ಲೂಟಿ ಹೊಡೆದ ಭ್ರಷ್ಟ ಸಚಿವರ ರಾಜೀನಾಮೆ ಕೇಳಿದ್ದೇ ನಾವೂ ಮಾಡಿದ ಅಪರಾಧವೇ?: R.Ashok

Political News: ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ಈ ವೇಳೆ ಪೋಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದು, ಆರ್.ಅಶೋಕ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತರ ಹಣ ಲೂಟಿ ಹೊಡೆದ ಭ್ರಷ್ಟ ಸಚಿವರ ರಾಜೀನಾಮೆ ಕೇಳಿದ್ದೇ ನಾವೂ ಮಾಡಿದ ಅಪರಾಧವೇ?ಮಹಾರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಣವನ್ನು ಕೊಳ್ಳೆ ಹೊಡೆದು, ದಲಿತರ ಹೊಟ್ಟೆಯ ಮೇಲೆ ಹೊಡೆದ ಭ್ರಷ್ಟ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸುವವರೆಗೆ ನಮ್ಮ ಹೋರಾಟದ ಕಿಚ್ಚು ನಂದಲು ಸಾಧ್ಯವೇ ಇಲ್ಲ ಎಂದು ಅಶೋಕ್ ಹೇಳಿದ್ದಾರೆ.

ಜನರ ಧ್ವನಿಯಾಗಿ ವಿಧಾನಸಭೆಗೆ ಮುತ್ತಿಗೆ ಹಾಕಲು ಹೊರಟ ನಮ್ಮನ್ನು ಈ ಬಂಡಕೋರ ಕಾಂಗ್ರೆಸ್ ಸರ್ಕಾರ ತನ್ನ ಪೋಲಿಸ್ ದಬ್ಬಾಳಿಕೆಯಿಂದ ತಡೆಯಲು ಯತ್ನಿಸಿದೆ. ನಮ್ಮನ್ನು ಬಂಧಿಸಿ ಪೋಲಿಸ್ ವ್ಯಾನಿಗೆ ಹತ್ತಿಸಬಹುದು, ಲಾಠಿ ಬೀಸಿ ಹೆದರಿಸಬಹುದು… ಆದರೆ ದಲಿತರ ಹಕ್ಕಿಗಾಗಿ ಧಗಧಗಿಸುತ್ತಿರುವ ಈ ಕ್ರಾಂತಿಯ ಜ್ವಾಲೆಯನ್ನು ಆರಸಲು ನಿಮ್ಮ ಖಾಕಿ ದೌರ್ಜನ್ಯದಿಂದ ಸಾಧ್ಯವಿಲ್ಲ!

ನೆನಪಿರಲಿ, ದಲಿತರಿಗೆ ಮತ್ತು ನಾಡಿನ ಜನತೆಗೆ ಎಸಗಿರುವ ಈ ದ್ರೋಹಕ್ಕೆ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ. ಬಿ. ನಾಗೇಂದ್ರ ಅವರ ವಜಾ ಒಂದೇ ನಮ್ಮ ಏಕೈಕ ಆಗ್ರಹ. ಅಲ್ಲಿಯವರೆಗೆ ನಮ್ಮ ಪ್ರತಿಭಟನೆ, ನಮ್ಮ ಸಮರ ವಿಶ್ರಮಿಸುವುದಿಲ್ಲ! ಈ ಜನವಿರೋಧಿ, ದಲಿತವಿರೋಧಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸುವವರೆಗೂ ನಮ್ಮ ಈ ಕ್ರಾಂತಿ ಮುಂದುವರೆಯಲಿದೆ!

About The Author