Wednesday, September 17, 2025

Latest Posts

ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

- Advertisement -

Sports News: ಕ್ರಿಕೇಟಿಗ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೋರ್ವ ತನ್ನ ಮಕ್ಕಳ ಶಾಲೆ ಫೀಸ್ ಕಟ್ಟಲು ಇಟ್ಟಿದ ಹಣದಿಂದ, ಸಿಎಸ್‌ಕೆ ಮ್ಯಾಚ್ ನಡೆಯುವಾಗ ಬ್ಲಾಕ್‌ನಲ್ಲಿ ಮಾರಾಟವಾಗುತ್ತಿದ್ದ ಟಿಕೇಟ್ ಖರೀದಿಸಿ, ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ.

ಆತ ತನ್ನ ಮೂವರು ಮಕ್ಕಳ ಜೊತೆ ಬಂದು, ನಾಲ್ಕು ಟಿಕೇಟ್‌ಗೆ 64 ಸಾವಿರ ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿದ್ದಾನೆ. ಈ ಮಾತು ಕೇಳಿ ಕೆಲವರು ಈತನ ಬಳಿ ರಾಶಿ ರಾಶಿ ದುಡ್ಡಿರಬೇಕು. ಈತ ಶ್ರೀಮಂತನಿರಬೇಕು ಅಂತಾನೇ ಅಂದುಕೊಂಡಿದ್ದರು. ಆದರೆ ಮುಂದಿನ ಮಾತಿನ ಬಳಿಕ ತಿಳಿದಿದ್ದೇನೆಂದರೆ, ಈಗ ತನ್ನ ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಹೊಂದಿಸಿದ್ದ ಹಣವನ್ನು ತಂದು, ಟಿಕೇಟ್ ಖರೀದಿಸಿ, ಸಿಎಸ್‌ಕೆ ತಂಡದ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾನೆ. ಯಾಕಂದ್ರೆ ಈತನ ಫೇವರಿಟ್ ಆಟಗಾರ ಧೋನಿ ಅಂತೆ. ಆತನನ್ನು ನೋಡಲೆಂದೇ, 64 ಸಾವಿರ ಖರ್ಚು ಮಾಡಿ, ಟಿಕೇಟ್ ಪರ್ಚೇಸ್ ಮಾಡಿದ್ದಾನೆ.

ಇನ್ನು ಈತನಷ್ಟೇ ಧೋನಿ ಫ್ಯಾನ್ ಅಲ್ಲ, ಬದಲಾಗಿ ಈತನ ಮಕ್ಕಳು ಕೂಡ ಧೋನಿ ಫ್ಯಾನ್ಸ್. ತನ್ನ ಮಕ್ಕಳಿಗೆ ಧೋನಿಯನ್ನು ತೋರಿಸಿದ್ದೇ ತನಗೆ ಭಾರಿ ಖುಷಿ ಕೊಟ್ಟಿದೆ, ಇದೇ ನಮ್ಮ ಗುರಿಯಾಗಿತ್ತು ಅಂತಾ ಈ ಅಭಿಮಾನಿ ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೇ, ಫೀಸ್ ಮತ್ತೆ ಕಟ್ಟಿದರಾಯಿತು, ಮೊದಲು ಆಟ ನೋಡಬೇಕಿತ್ತು. ಅದಕ್ಕೆ ಮಕ್ಕಳನ್ನು ಕರೆದುಕೊಂಡು ಬಂದಿದ್ದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್‌

ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ‌ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..

ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ

- Advertisement -

Latest Posts

Don't Miss