Dharwad News: ಧಾರವಾಡ: ಧಾರವಾಡದ ಬುದ್ಧರಕ್ಕಿತ ಶಾಲೆಯಲ್ಲಿ 8ನೇಯ ತರಗತಿ ಬಾಲಕನಿಗೆ ದೈಹಿಕ ಶಿಕ್ಷಕನೋರ್ವ, ಹಾಸ್ಟೇಲ್ ರೂಮಿನಲ್ಲಿ ಕೂಡಿಹಾಕಿ, ಚಿತ್ರಹಿಂಸೆ ಕೊಟ್ಟು ಹಲ್ಲೆ ಮಾಡಿದ್ದಾನೆ.
ಈ ಬುದ್ಧರಕ್ಕಿತ ಶಾಲೆ ಸರ್ಕಾರಿ ಅನುದಾನಿತ ಶಾಲೆಯಾಗಿದ್ದು, ಈ ಶಾಲೆ ಹಾಸ್ಟೇಲ್‌ನಲ್ಲಿ ಜನವರಿ 22ರಂದು ದೈಹಿಕ ಶಿಕ್ಷಕನಾಗಿದ್ದ ಸಾಯಿಪ್ರಸಾಾದ್ ಎಂಬಾತ, ಪ್ರವೀಣ ಕರಡಿಗುಡ್ಡ ಎಂಬ ಬಾಲಕನ ಮೇಲೆ ಹಲ್ಲೆ ನಡೆಸಿದ್ದು, ಕೈಗೆ ಸ್ಟಿಚ್ ಬೀಳುವ ರೇಂಜಿಗೆ ಹೊಡೆದಿದ್ದಾನೆ. ಅಲ್ಲದೇ, ಘಟನೆಯ ಬಗ್ಗೆ ಪೋಷಕರಿಗೆ ಸಂಬಂಧಿಕರಿಗೆ ತಿಳಿಸದಂತೆ ಬೆದರಿಕೆ ಕೂಡ ಹಾಕಿದ್ದಾನೆ.
ಬಾಲಕ ಬೈಲಹೊಂಗಲ ತಾಲೂಕಿನ ಪುಳಾರಕೊಪ್ಪ ಗ್ರಾಮದವನಾಗಿದ್ದು, ಜಾತಿ ನಿಂದನೆ ಮಾಡಿ, ಶಿಕ್ಷಕ ಹಲ್ಲೆ ನಡೆಸಿದ್ದಾನೆಂಬ ಆರೋಪವಿದೆ. ಸದ್ಯ ಬಾಲಕನ ಪೋಷಕರು ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಶಿಕ್ಷಕನಿಗಾಗಿ ಹುಡುಕಾಟ ನಡೆಸಿದ್ದಾರೆ.