ತಾಯಿಗೆ ಗೊತ್ತಿಲ್ಲದಂತೆ ತಾಯಿಯನ್ನು ಹಿಂಬಾಲಿಸಿ ಹೋದ, 9 ವರ್ಷದ ಬಾಲಕ, ಲಿಫ್ಟ್ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಆಶಿಶ್ ಎಂಬ 9 ವರ್ಷದ ಬಾಲಕ ಸಾವನ್ನಪ್ಪಿದ್ದು, ಇವನ ತಂದೆ ತಾಯಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದರು. ದೆಹಲಿಯ ವಿಕಾಸಪುರಿ ಏರಿಯಾದಲ್ಲಿ ಇವರ ಅಂಗಡಿ ಇದ್ದು, ಇಲ್ಲೇ ಹತ್ತಿರದ ಬಿಲ್ಡಿಂಗ್‌ನ ಜನ, ಇವರ ಬಳಿ, ತಮ್ಮ ಬಟ್ಟೆಯನ್ನ ಇಸ್ತ್ರಿ ಹಾಕುವುದಕ್ಕೆ ಕೊಡುತ್ತಿದ್ದರು.
ಈ ಬಾಲಕನ ತಾಯಿ ರೇಖಾ, ಆ ಬಿಲ್ಡಿಂಗ್‌ನ 5ನೇ ಮಹಡಿಯವರ ಮನೆಗೆ ಅವರ ಬಟ್ಟೆಯನ್ನ ತಲುಪಿಸುವುದಕ್ಕೆ ಹೋಗಿದ್ದಳು. ಮತ್ತು ಮಗನನ್ನು ಅಲ್ಲೇ ಅಂಗಡಿಯಲ್ಲಿ ಬಿಟ್ಟಿದ್ದಳು. ಆದರೆ ಬಾಲಕ ಅಂಗಡಿಯಲ್ಲಿ ಕುಳಿತುಕೊಳ್ಳುವುದು ಬಿಟ್ಟು, ಆಕೆಯನ್ನ ಹಿಂಬಾಲಿಸಿಕೊಂಡು, ಬಿಲ್ಡಿಂಗ್‌ಗೆ ಹೋಗಿದ್ದಾನೆ. ತಾಯಿ ರೇಖಾ ಮೆಟ್ಟಿಲು ಹತ್ತಿ 5ನೇ ಮಹಡಿಗೆ ಹೋದರೆ, ಬಾಲಕ ಆಶಿಶ್, ಲಿಫ್ಟ್‌ನಲ್ಲಿ ಹೋಗಿದ್ದಾನೆ.
ಲಿಫ್ಟ್‌ಗೆ ಹೋಗುತ್ತಿದ್ದಂತೆ ಅವನ ಕೈ ಲಿಫ್ಟ್ ಬಾಗಿಲಿಗೆ ಸಿಲುಕಿದೆ. ಬಾಗಿಲು ಮತ್ತೆ ಓಪೆನ್ ಮಾಡಲು ಅವನು ಅಲ್ಲೇ ಇದ್ದ ಯಾವುದೋ ಬಟನ್ ಆನ್ ಮಾಡಿದ್ದಾನೆ. ಆದರೆ ಲಿಫ್ಟ್ ಮಧ್ಯಕ್ಕೆ ಹೋಗಿ, ಸಿಲುಕಿಕೊಂಡಿದೆ. ಮಗುವಿಗೆ ಮೈ ತುಂಬ ಗಾಯವಾಗಿದ್ದು, ಲಿಫ್ಟ್‌ನಲ್ಲಿ ಉಸಿರುಗಟ್ಟಿ ಸತ್ತಿದ್ದಾನೆಂದು, ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಗು ತುಂಬ ಹೊತ್ತಾದರೂ ಮನೆಗೆ ಬಂದಿಲ್ಲವೆಂದು ಅಪ್ಪ ಅಮ್ಮ ಹುಡುಕಿದಾಗ, ಲಿಫ್ಟ್ ನಲ್ಲಿ ಮಗು ಸಿಕ್ಕಿದೆ. ಅವನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಕೂಡ, ಅದಾಗಲೇ ಮಗುವಿನ ಪ್ರಾಣ ಹೊರಟು ಹೋಗಿತ್ತು.
ದೇವಸ್ಥಾನದಲ್ಲಿ ಮೆಟ್ಟಿಲು ಮುರಿದು 30ಕ್ಕೂ ಹೆಚ್ಚು ಜನ ಬಾವಿಗೆ.. 4 ಜನರ ಸಾವು
ಕಿಂಗ್ ಚಾರ್ಲ್ಸ್ಗೆ ಬರ್ಗರ್ ಕಿಂಗ್ ಕಿರೀಟ್ ಕೊಡಲು ಮುಂದಾದ ಫ್ಯಾನ್.. ಆಮೇಲೇನಾಯ್ತು..?