Friday, July 11, 2025

Latest Posts

ಜೆಡಿಎಸ್ ಎಲ್ಲಿದೆ ಅಂತಾ ತೋರಿಸೋ ಸಾಮರ್ಥ್ಯ ‌91 ವರ್ಷದ ದೇವೇಗೌಡರಲ್ಲಿದೆ: ಸಿದ್ದರಾಮಯ್ಯಗೆ ಹೆಚ್ಡಿಡಿ ಟಾಂಗ್‌

- Advertisement -

Political News: ಇಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಜೆಡಿಎಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿದ್ದು, ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ. ಭಾರತ ಮಾತೆಗೆ ಹೂಮಾಲೆ ಹಾಕಿ, ಶ್ಯಾಮ್ ಪ್ರಕಾಶ್ ಮುಖರ್ಜಿ ದೀನ್ ದಯಾಲ್ ಉಪಾಧ್ಯಾಯ ಅವರಿಗೆ ಹೂ ಗುಚ್ಚ ಅರ್ಪಿಸಿ ವೇದಿಕೆಗೆ ಬಂದಿದ್ದೇನೆ ಎಂದರು.

ಅಲ್ಲದೇ, ಕರ್ನಾಟಕದ ಬಿಜೆಪಿ ರಾಜ್ಯದ್ಯಕ್ಷ ವಿಜಯೇಂದ್ರ ನುರಿತ ಹಿರಿಯ ಮುಖಂಡರಗಿಂತ ಹೆಚ್ಚು ಎಲ್ಲಾ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಾಜಿ‌ ಸಿಎಂ ಹಾಗೂ ಮಂಡ್ಯ ಅಭ್ಯರ್ಥಿ ಕುಮಾರಸ್ವಾಮಿ ಮಾತಾನಾಡಿದ್ರು. ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಾಹಿತಿಯನ್ನ ಬಿಜೆಪಿ ವರಿಷ್ಠರಿಗೆ ನೀಡ್ತಿದ್ದಾರೆ. ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು ಎಂದು ದೇವೇಗೌಡರು ಹೇಳಿದ್ದಾರೆ.

ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸಮಯ ತುಂಬಾ ಕಡಿಮೆ ಇದೆ.ಹಿಂದೆ ಆದಂತಹ ವಿಚಾರಗಳನ್ನ ಮರೆತು ನಾವೆಲ್ಲಾ ಒಂದಾಗಬೇಕಿದೆ. ಕೇವಲ ಮೋದಿ ಹೆಸರು ಸಾಕಾಗೊಲ್ಲಾ. ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಮೋದಿ ಅಮಿತ್ ಶಾ ಇಬ್ಬರೇ ರಾಷ್ಟ್ರದ ಸಮಸ್ಯೆಗಳನ್ನ ಪರಿಹಾರ ಮಾಡ್ತಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಏನಾಗ್ತಿದೆ. ತುಂಬಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಪರ ಇದೆ. ೨೮ ಕ್ಷೇತ್ರಗಳಲ್ಲು ಬಿಜೆಪಿ ಜೆಡಿಎಸ್ ಗೆಲ್ಲಬೇಕು ಎಂದು ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

೨೮ ಕ್ಷೇತ್ರಗಳಲ್ಲು ಕಾಂಗ್ರೆಸ್ ಹಣ ಬಲದ ನಾವು ಚಾಲೆಂಜ್ ಮಾಡಬೇಕಿದೆ. ಹೊರ ರಾಜ್ಯಕ್ಕು ಕಾಂಗ್ರೆಸ್ ನವರು ಹಣ ಸರಬರಾಜು ಮಾಡ್ತಿದ್ದಾರೆ. ರಾಜಸ್ಥಾನ, ತೆಲಾಂಗಣ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗ್ತಿದೆ. ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೆ ಮೋದಿ ಹಣ ಕಳುಹಿಸಲು ಸಾಧ್ಯವಿಲ್ಲ.

ಸಿದ್ದರಾಮಯ್ಯ ಅವ್ರು.. ‌ಜೆಡಿಎಸ್ ಎಲ್ಲಿದೆ‌ ಅಂತಾರೆ. ಅಧಿಕಾರದ ಮದ. ಜೆಡಿಎಸ್..‌ಎಲ್ಲಿದೆ ಅಂತಾ ತೋರಿಸೋ ಸಾಮರ್ಥ್ಯ ‌91 ವರ್ಷದ ದೇವೇಗೌಡರಲ್ಲಿದೆ. ಮೋದಿ ಅವರಿಗೂ‌ ನನಗೂ‌ ಒಮ್ಮೆ ತಿಕ್ಕಾಟ ಆಯ್ತು‌‌. ಅದು ಗೋದ್ರಾ ಸಂಬಂಧ.  ಗ್ರೌಂಡ್ ನಲ್ಲಿ ಏನೇ ಸಮಸ್ಯೆ ಇದ್ರೂ ಹೊಂದಾಣಿಕೆ ಮಾಡಿಕೊಂಡು ಹೋಗಿ. ಯಾರು ಯಾರ ಮೇಲೂ ದೂರುವುದು ಬೇಡ. ‌ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತೀ ಕ್ಷೇತ್ರಗಳಲ್ಲೂ ಮೈತ್ರಿಗೆ ಸ್ವಂತ ಬಲ ಇದೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಗೂಂಡಾಪಡೆ ಕಟ್ಟಿರುವ ನಿಮ್ಮ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿದೆ: ಯತೀಂದ್ರಗೆ ಪ್ರೀತಂಗೌಡ ಟಾಂಗ್

ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಸಂಸದ ಡಿ.ಕೆ.ಸುರೇಶ್

ಮುನಿಸು ಮರೆತು ಒಂದಾದ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ದಂಪತಿ

- Advertisement -

Latest Posts

Don't Miss