Political News: ಹರಿಯಾಣ ಬಿಜೆಪಿ ವತಿಯಿಂದ ರಾಹುಲ್ ಗಾಂಧಿಗೆ 1 ಕೆಜಿ ಜಿಲೇಬಿ ಪಾರ್ಸಲ್

Political News: ನಿನ್ನೆ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ. ಹಾಗಾಗಿ ಟ್ವೀಟ್‌ನಲ್ಲಿ ಬಿಜೆಪಿ ರಾಹುಲ್ ಗಾಂಧಿಯ ಜಿಲೇಬಿ ಹೇಳಿಕೆಗೆ, ಟಾಂಗ್ ಕೊಡುವಂತೆ, ರಾಹುಲ್ ಗಾಂಧಿಗೆ ಜಿಲೇಬಿ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದೆ.

ಫುಡ್ ಡಿಲೆವರಿ ಆ್ಯಪ್ ಆಗಿರುವ ಸ್ವಿಗ್ಗಿ ಮೂಲಕ, ಜಿಲೇಬಿ ಕಳುಹಿಸಲಾಗಿದ್ದು, ರಾಹುಲ್ ಗಾಂಧಿಯವರು ಹಣ ಕೊಟ್ಟು, ಜಿಲೇಬಿ ಪಡೆಯಬೇಕು ಎಂದು ಬಿಜೆಪಿ ತಮಾಷೆಯಾಗಿ ಟ್ವೀಟ್ ಮಾಡಿದೆ. 550 ರೂಪಾಯಿ ಮೌಲ್ಯದ 1 ಕೆಜಿ ಜಿಲೆಬಿ ಕಳುಹಿಸಲಾಗಿದೆಯಂತೆ. ಇದಕ್ಕೆ ಶೀರ್ಶಿಕೆ ಕೊಟ್ಟಿರುವ ಬಿಜೆಪಿ ಭಾರತೀಯ ಜನತಾ ಪಾರ್ಟಿ ಹರಿಯಾಣಾದ ವತಿಯಿಂದ, ಬಿಜೆಪಿ ಕಾರ್ಯಕರ್ತರ ವತಿಯಿಂದ ರಾಹುಲ್ ಗಾಂಧಿಯವರಿಗಾಗಿ ಅವರ ಮನೆಗೆ ಜಿಲೇಬಿ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹರಿಯಾಣಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ಜಿಲೇಬಿಯನ್ನು ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ತಯಾರಿಸಿ, ಮಾರಾಟ ಮಾಡುವುದರ ಜೊತೆಗೆ, ಉದ್ಯೋಗ ಸೃಷ್ಟಿಗೆ ಮತ್ತು ಆದಾಯ ಸೃಷ್ಟಿಸಲು ರಫ್ತು ಮಾಡಲಾಗುತ್ತದೆ. ಕೇಂದ್ರದ ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಿಂದ ಜಿಲೇಬಿ ಮಾರಾಟಗಾರರು ಹಾನಿಗೊಳಗಾಗಿದ್ದಾರೆ ಎಂದು ಹೇಳಿದ್ದರು.

About The Author