Thursday, October 17, 2024

Latest Posts

ಪೂರ್ವ ಜನ್ಮ ಅನ್ನೋದು ನಿಜಾನಾ? ಕನಸಿನಲ್ಲಿ ಹಿಂದಿನ ಜನ್ಮದ ಘಟನೆಗಳು ಕಾಣಿಸುತ್ತಾ?

- Advertisement -

Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.

ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು ಸಂಪೂರ್ಣವಾಗಿ ಮರೆಯುವುದೂ ಇಲ್ಲ.

ಕಳೆದ ಜನ್ಮದಲ್ಲಿ ಒಂದು ಸ್ಥಳ ನಮಗೆ ಬಹು ಪ್ರಿಯವಾಗಿರುತ್ತದೆ. ಆ ಸ್ಥಳದಲ್ಲೇ ನಾವು ಆಡಿ ಬೆಳೆದಿರಬಹುದು. ಅಥವಾ ಅದು ನಮಗೆ ಸಂಬಂಧ ಪಟ್ಟ ಯಾವುದೇ ಮುಖ್ಯವಾದ ಜಾಗವಾಗಿರಬಹುದು. ಈ ಜನ್ಮದಲ್ಲಿ ಆ ಸ್ಥಳಕ್ಕೆ ಹೋದರೆ, ನಾನು ಇಲ್ಲಿ ಮೊದಲೇ ಬಂದಿದ್ದೆ, ಅಥವಾ ಇದ್ಯಾಕೋ ನನಗೆ ತುಂಬಾ ಇಷ್ಟವಾದ ಜಾಗ ಅನ್ನೋ ರೀತಿ ಅನ್ನಿಸುತ್ತದೆ.

ಅದೇ ರೀತಿ ನಾವು ಕಾಣುವ ಕನಸಿನಲ್ಲಿ ನಮ್ಮ ಪೂರ್ವಜನ್ಮದ ಅನುಭವವೇ ಹೆಚ್ಚು ಕಾಣಿಸುತ್ತದೆ ಅಂತಾರೆ ಡಾ.ಭರಣಿ. ಪೂರ್ವ ಜನ್ಮದ ಅನುಭವ ಮತ್ತು ನೆನಪು ನಾವು ಈ ಜನ್ಮದಲ್ಲಿ ಪೂರ್ತಿಯಾಗಿ ಮರೆಯುವುದೂ ಇಲ್ಲ. ನೆನಪಿನಲ್ಲಿ ಇರಿಸಿಕೊಳ್ಳುವುದೂ ಇಲ್ಲ. ಇನ್ನೂ ಹಲವು ವಿಚಾರಗಳ ಬಗ್ಗೆ ರೇಖಿ ತಜ್ಞೆ ಭರಣಿಯವರು ವಿವರಿಸಿದ್ದಾರೆ.

ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ  ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss