ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ..!

Movie News: ಸಿನಿಮಾದಲ್ಲಿ ವಿಲನ್ ಆಗಿ ಪಾತ್ರ ನಿರ್ವಹಿಸಿದಾಗ, ಅದರ ಪವರ್ ಹೇಗಿರುತ್ತೆ ಎಂದರೆ, ಕೆಲವರು ಅವರನ್ನು ನೋಡಿದ ತಕ್ಷಣ, ನೀನು ಮಾಡಿದ್ದು ಸರೀನಾ..? ಅಂತಾ ಪ್ರಶ್ನೆ ಕೇಳುವಂತಿರಬೇಕು. ಹಾಗೆ ಕೇಳಿದಾಗ, ನೀವು ವಿಲನ್ ಆಗಿ ಪಾತ್ರ ಮಾಡಿದ್ದು ಸಾರ್ಥಕ ಎನ್ನಬಹುದು. ಆದರೆ ವಿಲನ್ ಮಾಡಿದ ಪಾತ್ರ, ಎದುರಿಗೆ ಸಿಕ್ಕಾಗ ಸರಿಯಾಗಿ ಬಾರಿಸುತ್ತೇನೆ ಅನ್ನೋ ರೀತಿ ಇದ್ದರೆ..? ಇಂಥದ್ದೇ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮೇಲೆ ಹೈದರಾಾಬಾದ್‌ನಲ್ಲಿ ಹಲ್ಲೆಯಾಗಿದೆ. ತೆಲುಗಿನ ಲವ್‌ ರೆಡ್ಡಿ ಸಿನಿಮಾದಲ್ಲಿ ರಾಮಸ್ವಾಮಿ ವಿಲನ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಶೋ ಹೈದರಾಬಾದ್‌ನಲ್ಲಿ ಇತ್ತು. ಈ ವೇಳೆ ಸಿನಿಮಾ ತಂಡ ಮತ್ತು ಒಂದಿಷ್ಟು ಜನ ಸಿನಿಮಾ ನೋಡಲು, ಥಿಯೇಟರ್‌ನಲ್ಲಿ ಸೇರಿದ್ದಾರೆ.

ಸಿನಿಮಾ ಮುಗಿದ ಬಳಿಕ, ಸಿನಿಮಾ ತಂಡದವರು ಸ್ಟೇಜ್‌ ಮೇಲೆ ಹೋಗಿ ಮಾತನಾಡುತ್ತಿರುವಾಗ, ಓರ್ವ ಮಹಿಳೆ ಓಡಿ ಬಂದು, ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾಳೆ. ರಾಮಸ್ವಾಮಿ ಮಾಡಿದ ವಿಲನ್ ಪಾತ್ರ ಅವಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಅಂದ್ರೆ, ರಾಮಸ್ವಾಮಿ ನಿಜ ಜೀವನದಲ್ಲಿಯೂ ವಿಲನ್ ಅನ್ನೋ ರೀತಿ ಆಕೆ ವರ್ತಿಸಿದ್ದಾಳೆ.

ಸ್ಟೇಜ್‌ ಮೇಲೆ ಬಂದು ರಾಮಸ್ವಾಮಿ ಅವರ ಕಾಲರ್ ಹಿಡಿದು, ಹೊಡೆಯಲು ಬಂದಾಗ, ರಾಮಸ್ವಾಮಿ ಅವರಿಗೆ ಮತ್ತು ಸಿನಿಮಾ ತಂಡದವರಿಗೆ ಒಮ್ಮೆ ಅಲ್ಲಿ ಏನಾಗುತ್ತಿದೆ ಅನ್ನೋದರ ಬಗ್ಗೆ ಗೊಂದಲ ಉಂಟಾಗಿದೆ. ಬಳಿಕ ಅಕ್ಕಪಕ್ಕದಲ್ಲೇ ಇದ್ದವರು, ಆಕೆಯನ್ನು ತಡೆದು, ದೂರ ಕಳಿಸಿದ್ದಾರೆ.

ಇನ್ನು ಸಿನಿಮಾ ಪ್ರಮೋಟ್ ಮಾಡಲು, ಚಿತ್ರತತಂಡದವರು ಈ ರೀತಿಯ ಗಿಮಿಕ್ ಮಾಡಿರಬಹುದು ಅಂತಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.

About The Author