Thursday, November 7, 2024

Latest Posts

40 ಸಾವಿರ ಕೋಟಿ ಸಾಲ ಪಡೆಯಲು ಸರ್ಕಾರ ನಿರ್ಧಾರ: ಸಾಲ ಪಡೆಯಲು ಆರ್‌ಬಿಐ ಅನುಮತಿ

- Advertisement -

Political News: ರಾಜ್ಯದ ಒಟ್ಟು ಸಾಲದ ಮೊತ್ತ 5.53 ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದೀಗ ಮತ್ತೆ ಅಭಿವೃದ್ಧಿ ಕಾರ್ಯಕ್ಕಾಗಿ 40 ಸಾವಿರ ಕೋಟಿ ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ. ಸಾಲ ಪಡೆಯಲು ಆರ್‌ಬಿಐ ಕೂಡ ಅನುಮತಿ ನೀಡಿದೆ.

ರಾಜ್ಯ ಸರ್ಕಾರ ಈ ವರ್ಷ ನಡೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ 6,885 ಕೋಟಿ ರೂಪಾಯಿ ಮತ್ತು ಮುಕ್ತ ಮಾರುಕಟ್ಟೆಯಿಂದ 96,840 ಕೋಟಿ ರೂಪಾಯಿ ಸೇರಿ ಒಟ್ಟು 1.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಅಂದಾಜು ಮಾಡಿತ್ತು. ಆದರೆ ಸೆಪ್ಟೆಂಬರ್ ವರೆಗೆ 4 ಸಾವಿರ ಕೋಟಿ ರೂಪಾಯಿ ಸಾರ್ವಜನಿಕ ಸಾಲ ಮಾಡಿರುವುದಲ್ಲದೇ, ಮುಕ್ತ ಮಾರುಕಟ್ಟೆಯಿಂದ 3 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿತ್ತು.

ಈ ಮೊದಲು ಅಕ್ಟೋಬರ್‌ನಲ್ಲಿ ಮುಕ್ತಮಾರುಕಟ್ಟೆಯಿಂದ 20 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಸಾಲ ಪಡೆಯಲು ಆರ್‌ಬಿಐನಿಂದ ರಾಜ್ಯ ಸರ್ಕಾರ ಅನುಮತಿ ಪಡೆದಿದ್ದು, ಇದೀಗ ನವೆಂಬರ್ ಮತ್ತು ಡಿಸೆಂಬರ್ ಸೇರಿ ತಲಾ 20 ಸಾವಿರ ಕೋಟಿಯಂತೆ, 40 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಸಾಲಕ್ಕೆ ಅನುಮತಿ ಪಡೆದಿದೆ.

ಎಲ್ಲ ಸಾಲ ಸೇರಿ ಡಿಸೆಂಬರ್ ಅಂತ್ಯಕ್ಕೆ 67 ಸಾವಿರ ಕೋಟಿ ರೂಪಾಯಿ ಸಾಲ ಪಡೆದಂತಾಗುತ್ತದೆ. ಗ್ಯಾರಂಟಿ ಯೋಜನೆಗಳಿಗಾಗಿ, ನೌಕರರ ವೇತನ ಪರಿಷ್ಕರಣೆ, ಹಲವು ಭದ್ರತಾ ವೆಚ್ಚದ ಜೊತೆ, ವಾರ್ಷಿಕ ಬಡ್ಡಿ ರೂಪದಲ್ಲಿ 40 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಜಿಎಸ್‌ಡಿಪಿಯ ಶೇ.2.95ರಷ್ಟಿರುವ ವಿತ್ತೀಯ ಕೊರತೆ, ವಿತ್ತೀಯ ಹೊಣೆಗಾರಿಕೆಯ ಅಧಿನಿಯಮ 2002ರ ಅನ್ವಯ ವಿತ್ತೀಯ ಕೊರತೆಯ ಜಿಎಸ್‌ಡಿಪಿಯ ಶೇ. 3ರೊಳಗೆ ಇರಬೇಕು. ಅದೇ ರೀತಿ ಸಾಲದ ಪ್ರಮಾಣವು ಶೇ.25ರೊಳಗೆ ಇರಬೇಕು. ಪ್ರಸ್ತುತ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.2.95ರಷ್ಟಿದ್ದು, ಸಾಲದ ಪ್ರಮಾಣವು ಶೇ.23.68ಕ್ಕೆ ತಲುಪಿದೆ. ಬದ್ಧತಾ ವೆಚ್ಚದ ಜತೆಗೆ ಸಾಲ ಮರುಪಾವತಿಯತತ್ತಲೂ ಸರಕಾರ ಗಮನ ಹರಿಸದಿದ್ದರೆ, ಸಾರ್ವಜನಿಕ ಆಸ್ತಿ ನಗದೀಕರ, ಸಬ್ಸಿಡಿಗಳ ಕಡಿದಂತಹ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಸಹ ಎದುರಾಗಬಹುದು ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಸಹ ಎಚ್ಚರಿಸಿತ್ತು.

- Advertisement -

Latest Posts

Don't Miss