ಅಪ್ಪನನ್ನೇ ವಿವಾಹವಾದ ಪುತ್ರಿ: ಯಾರು ಬೆಂಬಲಿಸದಿದ್ದರೂ ನಾವು ಸಂಸಾರ ನಡೆಸುತ್ತೇವೆ ಎಂದ ಮಗಳು

News: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವರು ಹಲವು ರೀತಿಯ ರೀಲ್ಸ್ ಮಾಡುತ್ತಾರೆ. ಅದರಲ್ಲಿ ಕೆಲವು ರೀಲ್ಸ್ ಅರ್ಥಪೂರ್ಣವಾದ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ. ಆದರೆ ಇನ್ನು ಕೆಲವು ಅರ್ಥವಿಲ್ಲದ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ.

ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಓರ್ವ ತಂದೆ ತನ್ನ ಮಗಳನ್ನೇ ವಿವಾಹವಾಗಿದ್ದಾನೆ. ಈತನಿಗೆ 50 ವರ್ಷ ವಯಸ್ಸಾಗಿದ್ದು, ಮಗಳಿಗೆ 24 ವರ್ಷ ವಯಸ್ಸಾಗಿದೆ. ಈ ವೀಡಿಯೋದಲ್ಲಿ ಮಗಳು ಮಾತನಾಡಿದ್ದು, ನಾನು ಮತ್ತು ನನ್ನ ಅಪ್ಪ ಇಬ್ಬರೂ ಮದುವೆಯಾಗಿದ್ದೇವೆ. ಈಗ ಸಮಾಜ ನಮ್ಮನ್ನು ಬೆಂಬಲಿಸಲಿ ಬಿಡಲಿ ನಾವಂತೂ ಜೊತೆಯಾಗಿ ಸಂಸಾರ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೇ ನಮ್ಮ ಸಂಬಂಧಕ್ಕೆ ಯಾರೂ ಬೆಲೆ ನೀಡಲಿಲ್ಲ. ಆದರೂ ನಾವು ಧೈರ್ಯವಾಗಿ ಮದುವೆಯಾಗಿದ್ದೇವೆ. ನಾವು ಎಲ್ಲರನ್ನೂ ಎದುರಿಸಿ ಬದುಕುತ್ತೇವೆ. ನಮ್ಮ ಬಗ್ಗೆ ಹಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಮಾಡಿದರೆ, ಮಾಡಿಕೊಳ್ಳಲ್ಲಿ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆ ಯುವತಿ ಹೇಳಿದ್ದಾಳೆ.

ಇದಕ್ಕೆ ಹಲವು ರೀತಿಯ ಕಾಮೆಂಟ್ ಬಂದಿದ್ದು, ಇವರಿಬ್ಬರು ಮಾಡಿರುವ ಕೆಲಸಕ್ಕೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಇವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಈ ರೀತಿ ವೀಡಿಯೋ ಮಾಡಿ ಹಾಕುತ್ತಾರೆ. ಅಸಲಿಗೆ ಅಲ್ಲೇನೂ ನಡೆದೇ ಇರುವುದಿಲ್ಲ ಅಂತ ಹೇಳಿದ್ದಾರೆ.

About The Author