International News: ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಏನೇನೋ ಮಾಡಬೇಕು, ಫೇಮಸ್ ಆಗಬೇಕು ಎಂದು ಮನಸ್ಸಿಗೆ ಬಂದಿದ್ದನ್ನು ಮಾಡುತ್ತಿದ್ದಾರೆ. ಅದರಲ್ಲಿ ಕೆಲವು ಹುಚ್ಚುಹುಚ್ಚಾಗಿದ್ದರೆ, ಮತ್ತೆ ಕೆಲವು ಅಸಹ್ಯವಾಗಿ, ಅಸಭ್ಯವಾಗಿ ಇರುತ್ತದೆ. ಅದೇ ರೀತಿ ವಿದೇಶದಲ್ಲಿ ಕೆಲವು ಹೆಣ್ಣು ಮಕ್ಕಳು ಬಾತ್‌ರೂಮ್ ವೇಷ ಧರಿಸಿ, ಮೆಟ್ರೋದಲ್ಲಿ ಓಡಾಡಿದ್ದಾರೆ.
ವಿದೇಶದಲ್ಲಿ ಬಿಕಿನಿ ಧರಿಸಿ ಓಡಾಡುವುದು, ಅರ್ದಂಬರ್ಧ ಬಟ್ಟೆ ಧರಿಸಿ ಓಡಾಡುವುದೆಲ್ಲ ಕಾಮನ್. ಆದರೆ ಮೂವರು ಹುಡುಗಿಯರು ಬಾತ್ ಟವಲ್ ಧರಿಸಿ, ಕಣ್ಣಿಗೆ ಕೂಲಿಗೆ ಗ್ಲಾಸ್ ಹಾಕಿ, ಮೆಟ್ರೋ ಹತ್ತಿ ಬಂದು, ರೀಲ್ಸ್ ಮಾಡಿದ್ದಾರೆ. ಈ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಇವರೆಲ್ಲ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳಂತೆ. ಮೆಟ್ರೋದಲ್ಲಿ ಕೆಲವರು ಇವರ ಅವತಾರ ಕಂಡು ಥೂ ಎಂದರೆ, ಮತ್ತೆ ಕೆಲವರು ಇವರ ಸ್ಟೈಲ್ ಕಂಡು ಇವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋಗಳಿಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ.
ಡೈರೆಕ್ಟ್ ಬಾತ್‌ರೂಮ್‌ನಿಂದ ಬೀದಿಗೆ ಬಂದಂತಿದೆ ಎಂದು ಒಬ್ಬರು ಹೇಳಿದ್ದಾರೆ. ಇದೇ ರೀತಿ ಹಲವರು ಹಲವು ರೀತಿಯ ಕಾಮೆಂಟ್ಸ್ ಹಾಾಕಿದ್ದಾರೆ. ಆದರೆ ಕೊನೆಗೆ ರಿಲೀಸ್ ಆಗಿರುವ ವೀಡಿಯೋ ನೋಡಿದ್ರೆ, ನಿಮಗೆ ರಿಯಾಲಿಟಿ ಗೊತ್ತಾಗುತ್ತದೆ. ಈ ವೀಡಿಯೋದಲ್ಲಿ ಈ ನಾಲ್ಕು ಹುಡುಗಿಯರು ತಮ್ಮ ಟವಲ್ ಬಿಚ್ಚಿ, ಒಳಗೆ ಹಾಕಿರುವ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.