Friday, December 13, 2024

Latest Posts

Recipe: ಪೂರಿ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಈ ಬಟಾಣಿ ಕೂರ್ಮಾ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, 4ರಿಂದ 5 ಆಲೂಗಡ್ಡೆ, 2 ಈರುಳ್ಳಿ, ಚಕ್ಕೆ, 1 ಪಲಾವ್ ಎಲೆ, ಲವಂಗ, ಏಲಕ್ಕಿ, ಪೆಪ್ಪರ್, ಜೀರಿಗೆ, 2ರಿಂದ 3 ಹಸಿಮೆಣಸು, ಚಿಕ್ಕ ತುಂಡು ಶುಂಠಿ, 4 ಎಸಳು ಬೆಳ್ಳುಳ್ಳಿ, ಗರಂ ಮಸಾಲೆ, ಖಾರದ ಪುಡಿ, 2 ಟೊಮೆಟೋ, ಎಣ್ಣೆ, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬಟಾಣಿ ಮತ್ತು ಬಟಾಟೆಯನ್ನು ಸಪರೇಟ್ ಆಗಿ ಬೇಯಿಸಿ. ಆಲೂಗಡ್ಡೆ ಮ್ಯಾಷ್ ಮಾಡಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ, ಹಸಿಮೆಣಸು, ಶುಂಠಿಯೊಂದಿಗೆ ಟೊಮೆಟೋ ಪ್ಯೂರಿ ತಯಾರಿಸಿಕೊಳ್ಳಿ. ಈಗ ಚಕ್ಕೆ, ಲವಂಗ, ಪೆಪ್ಪರ್, ಜೀರಿಗೆ ಎಲ್ಲವನ್ನೂ ಕುಚ್ಚಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಅದಕ್ಕೆ ಪಲಾವ್ ಎಲೆ, ಕುಟ್ಟಿ ಪುಡಿ ಮಾಡಿದ ಮಸಾಲೆ ಹಾಕಿ ಬಾಡಿಸಿ. ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಇದಾದ ಬಳಿಕ ಟೊಮೆಟೋ ಪ್ಯೂರಿ ಹಾಕಿ, ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

ಅದಾದ ಬಳಿಕ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಅರಿಶಿನ ಹಾಕಿ ಮಿಕ್ಸ್ ಮಾಡಿ. ಬಳಿಕ ಬೇಯಿಸಿ ಇಟ್ಟುಕೊಂಡ ಆಲೂಗಡ್ಡೆ ಮತ್ತು ಬಟಾಣಿ ಮತ್ತು ನೀರು ಹಾಕಿ ಗ್ರೇವಿ ರೆಡಿ ಮಾಡಿ. 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಈ ವೇಳೆ ಗ್ರೇವಿಯನ್ನು ಮಿಕ್ಸ್ ಮಾಡುತ್ತಲಿರಬೇಕು.

ನಂತರ ಬೇಕಾದ್ದಲ್ಲಿ ಫ್ರೆಶ್ ಕ್ರೀಮ್ ಸೇರಿಸಿ. ಇಲ್ಲವಾದಲ್ಲಿ ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ ಬಟಾಣಿ- ಬಟಾಟೆ ಕೂರ್ಮ ರೆಡಿ.

- Advertisement -

Latest Posts

Don't Miss