Friday, July 11, 2025

Latest Posts

Chanakya Neeti: ಇಂಥ ಸ್ಥಳಗಳಲ್ಲಿ ಮೌನವಾಗಿರಿ ಅಂದಿದ್ದಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯರು ಓರ್ವ ಮನುಷ್ಯ ತನ್ನ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನೇನು ಮಾಡಬೇಕು ಎಂಬ ಬಗ್ಗೆ ಹೇಳಿದ್ದಾರೆ. ಅಲ್ಲದೇ, ನಮ್ಮ ಗುಣ, ವಿವಾಹವಾಗುವಾಗ ಅನುಸರಿಸುವ ನಿಯಮಗಳು ಹೀಗೆ ಇನ್ನಿತರ ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ ಯಾವ ಸಮಯದಲ್ಲಿ, ಎಂಥ ಸ್ಥಳದಲ್ಲಿ ಮೌನವಾಗಿದ್ದರೆ ಉತ್ತಮ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ಜಗಳ ನಡೆಯುವ ಸಮಯದಲ್ಲಿ: ಯಾರ ಮಧ್ಯೆಯಾದರೂ ಜಗಳ ನಡೆಯುತ್ತಿದ್ದು, ಅಥವಾ ಯಾರಾದರೂ ನಿಮ್ಮೊಂದಿಗೆ ಜಗಳವಾಡಬೇಕು ಎಂದು ತಯಾರಾಗುತ್ತಿದ್ದಾರೆ ಎಂದಲ್ಲಿ, ನಿಮಗೂ ಆ ಜಗಳಕ್ಕೂ ಸಂಬಂಧವೇ ಇಲ್ಲ ಎಂಬಂಂತೆ ನೀವು ಇರಬೇಕು. ಏಕೆಂದರೆ, ಜಗಳವಾಡಿದಷ್ಟು ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮತ್ತು ಎದುರಿನವರಿಗೆ ನಿಮ್ಮ ನೆಮ್ಮದಿ ಹಾಳು ಮಾಡಿದ ಅವಕಾಶ ಸಿಕ್ಕಂತಾಗುತ್ತದೆ.

ನಿಮ್ಮನ್ನು ಯಾರಾದರೂ ಟೀಕೆ ಮಾಡುವ ಸಮಯದಲ್ಲಿ: ಕೆಲವರು ಬೇಕಂತಲೇ ಟೀಕಿಸಿ, ಅವಮಾನ ಮಾಡಲು ಪ್ರಯತ್ನಿಸುತ್ತಾರೆ. ಆ ರೀತಿ ಟೀಕೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ ಎನ್ನುತ್ತಾರೆ ಚಾಣಕ್ಯರು. ಇಂಥ ಟೀಕೆಗಳಿಗೆ ಪ್ರತಿಕ್ರಿಯಿಸಿದರೆ, ನಮ್ಮ ನೆಮ್ಮದಿಯೇ ಹಾಳಾಗುತ್ತದೆ.

ಯಾರಾದರೂ ಕೋಪಗೊಂಡಾಗ: ಇದಕ್ಕೆ ಉದಾಹರಮೆ ಎಂದರೆ, ಪತಿ-ಪತ್ನಿ ಜಗಳ ನಡೆಯುತ್ತಿರುವಾಗ, ಒಬ್ಬರು ಸಿಟ್ಟಿನಲ್ಲಿ ಇದ್ದರೆ, ಇನ್ನೊಬ್ಬರು ಮೌನವಾಗಿ ಇರಬೇಕು. ಇನ್ನೊಬ್ಬರು ಪ್ರತಿಕ್ರಿಯಿಸಿದರೆ, ಅಲ್ಲಿ ದೊಡ್ಡ ಜಗಳವೇ ಆಗುತ್ತದೆ. ಕೆಲವೊಮ್ಮೆ ಅಂಥ ಜಗಳದಲ್ಲಿ ಸಂಬಂಧ ಕೊನೆಗೊಳ್ಳುವ ಎಲ್ಲ ಸಾಧ್ಯತೆಗಳಿರುತ್ತದೆ.

ಭಾವನೆಗಳಿಗೆ ಬೆಲೆ ಇರದ ಸ್ಥಳದಲ್ಲಿ: ನಿಮ್ಮ ಭಾವನೆಗೆ ಎಲ್ಲಿ ಬೆಲೆ ಇರುವುದಿಲ್ಲವೋ, ಅಂಥ ಸ್ಥಳದಲ್ಲಿ ಮಾತನಾಡುವುದು, ನೀರಿನಲ್ಲಿ ಹೋಮ ಮಾಡಿದ ಹಾಗೆ. ಅಂಥ ಸ್ಥಳದಲ್ಲಿ ನೀವು ಏನೇ ಹೇಳಿದರೂ, ಅದರಿಂದ ಏನೂ ಉಪಯೋಗವಾಗುವುದಿಲ್ಲ.

ಆ ವಿಚಾರದ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರದೇ ಇದ್ದಲ್ಲಿ: ಒಂದು ವಿಷಯದ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲದೇ, ಇದ್ದಲ್ಲಿ, ಅಂಥ ವಿಷಯದ ಬಗ್ಗೆ ನಾವು ಮಾತನಾಡಬಾರದು ಅಂತಾರೆ ಚಾಣಕ್ಯರು.

ನಿಮಗೆ ಸಂಬಂಧವೇ ಇರದ ವಿಷಯದಲ್ಲಿ: ನಿಮ್ಮ ಎದುರಿಗೆ ಯಾರೋ ಜಗಳವಾಡುತ್ತಿದ್ದಾರೆ. ಅಥವಾ ಯಾರೋ ಏನೋ ಮಾತನಾಡುತ್ತಿದ್ದಾರೆ. ಆದರೆ ಆ ವಿಚಾರದ ಬಗ್ಗೆ ನಿಮಗೆ ಏನೂ ಗೊತ್ತೇ ಇಲ್ಲ ಅಂದಾಗ, ನೀವು ಆ ವಿಷಯದಲ್ಲಿ ಮೂಗು ತೂರಿಸಲು ಹೋಗಲೇಬಾರದು. ಇದರಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ.

- Advertisement -

Latest Posts

Don't Miss