Sports News: ವಿರಾಟ್ ಕೊಹ್ಲಿ ಭಾರತ ತೊರೆದು ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಎಂದು ಅವರ ಕೋಚ್ ರಾಜ್‌ಕುಮಾರ್ ಶರ್ಮಾ ಖಚಿತ ಪಡಿಸಿದ್ದಾರೆ.
ಕ್ರಿಕೇಟ್ ವೃತ್ತಿಯಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದ ಬಳಿಕ ವಿರಾಟ್ ಕೊಹ್ಲಿ ಲಂಡನ್‌ಗೆ ಹೋಗಿ ಶಿಫ್ಟ್ ಆಗಲಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ ಎಂದು ರಾಜ್‌ಕುಮಾರ್ ಶರ್ಮಾ ಮಾಧ್ಯಮಕ್ಕೆ ಹೇಳಿದ್ದಾರೆ. ಕೊಹ್ಲಿ- ಅನುಷ್ಕಾರ ಎರಡನೇಯ ಮಗು ಆಗಿರುವ ಅಕಾಯ್ ಲಂಡನ್‌ನಲ್ಲಿ ಜನಿಸಿದ್ದು, ಕೊಹ್ಲಿ ಪದೇ ಪದೇ ಲಂಡನ್‌ಗೆ ಹೋಗಿ ಬರುತ್ತಿದ್ದಾರೆ.
2024ರಲ್ಲಿ ಕ್ರಿಕೇಟ್ ಆಡಲಷ್ಟೇ ವಿರಾಟ್ ಕೊಹ್ಲಿ ಭಾರತಕ್ಕೆ ಬಂದಿದ್ದರು, ಉಳಿದ ಭಾಗವೆಲ್ಲ ಕೊಹ್ಲಿ ಲಂಡನ್‌ನಲ್ಲೇ ಕಳೆದಿದ್ದಾರೆ. ಈ ವರ್ಷ ಅವರು ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಿದ್ದಾರೆ. ಕೊಹ್ಲಿಗೆ ಈಗಾಗಲೇ ಲಂಡನ್‌ನಲ್ಲಿ ಸ್ವಂತ ಮನೆ ಇದೆ ಎಂದು ಹಲವರು ಅಂದಾಜು ಮಾಡಿದ್ದಾರೆ.
ಇನ್ನೂ 5 ವರ್ಷಗಳ ಕಾಲ ವಿರಾಟ್ ಕ್ರಿಕೇಟ್ ಜೀವನದಿಂದ ನಿವೃತ್ತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಟೀಂ ಇಂಡಿಯಾ ಜೊತೆ ಇನ್ನೂ 5 ವರ್ಷಗಳ ಕಾಲ ಇರುತ್ತಾರೆ. ಆದರೆ ಅವರು ಲಂಡನ್‌ನಲ್ಲಿ ಇದ್ದೇ ಟೀಂ ಇಂಡಿಯಾ ಜೊತೆ ಇರುತ್ತಾರೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.