Sunday, December 22, 2024

Latest Posts

Chanakya Neeti: ಬೇಗ ಉದ್ಧಾರವಾಗಬೇಕು ಅಂದ್ರೆ, ಚಾಣಕ್ಯರ ಈ ಮಾತನ್ನು ಕೇಳಿ

- Advertisement -

Chanakya Neeti: ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಬದುಕುವ ರೀತಿಯಿಂದ ಹಿಡಿದು, ಶ್ರೀಮಂತರಾಗಲು ಏನು ಮಾಡಬೇಕು. ಉದ್ಧಾರವಾಗಲು ಏನು ಮಾಡಬೇಕು. ಸಂಬಂಧ ಬೆಳೆಸುವಾಗ ಯಾವ ಗುಣಗಳನ್ನು ನೋಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ನಾವಿಂದು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ.

ಚೆನ್ನಾಗಿ ಪರಿಶ್ರಮ ಪಡಬೇಕು. ನೀವು ಯಾವುದೇ ವಿಷಯದಲ್ಲಿ ಯಶಸ್ಸು ಸಾಧಿಸಬೇಕು ಅಂದ್ರೆ, ಚೆನ್ನಾಗಿ ಶ್ರಮ ಪಟ್ಟರೆ ಮಾತ್ರ, ಯಶಸ್ಸು ಸಿಗಲು ಸಾಧ್ಯ. ನಾನು ನಿಧಾನವಾಗಿ ಎದ್ದು, ಸಾಧ್ಯವಾದಷ್ಟು ಕೆಲಸ ಮಾತ್ರ ಮಾಡುತ್ತೇನೆ ಎಂದರೆ, ನಿಮಗೆ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ನಿಮ್ಮೆಲ್ಲ ಕಂಫರ್ಟ್ ಜೋನ್ ಬಿಟ್ಟು ಹೊರಬಂದು, ಶ್ರಮಪಟ್ಟು ಕೆಲಸ ಮಾಡಬೇಕು.

ಮಾತಿನಲ್ಲಿ ಮೃದುತ್ವವಿರಬೇಕು. ನೀವು ಆಡುವ ಮಾತಿನಿಂದ ನಿಮ್ಮ ಎದುರಿಗೆ ಇರುವವರ ಮನಸ್ಸಿಗೆ ನೋವುಂಟಾಗಬಾರದು. ಆ ರೀತಿ ವಿನಮೃವಾಗಿ ನೀವು ಮಾತನಾಡಬೇಕು. ಹಾಗಾಗಿಯೇ ಹಿರಿಯರು, ಬೆಲ್ಲವಿಲ್ಲದಿದ್ದರೂ, ಬೆಲ್ಲದಂಥ ಮಾತಿರಬೇಕು ಎಂದು ಹೇಳುವುದು. ನಿಮ್ಮ ಮಾತಿನಿಂದ ನಿಮ್ಮ ಮನಸ್ಥಿತಿ ಮತ್ತು ನಿಮ್ಮ ಗುಣವನ್ನು ಸುಲಭವಾಗಿ ಅರಿಯಬಹುದು. ಹಾಗಾಗಿಯೇ ಮಾತಿನಲ್ಲಿ ಮೃದುತ್ವವಿರಬೇಕು.

ಎಲ್ಲ ವಿಷಯದಲ್ಲೂ ಗೌಪ್ಯತೆ ಕಾಪಾಡಿಕೊಳ್ಳುವುದನ್ನು ಕಲಿಯಿರಿ. ನೀವು ಏನಾದರೂ ಕೆಲಸ ಮಾಡುತ್ತಿದ್ದೀರಿ. ಅಥವಾ ಏನಾದರೂ ಕಲಿಯುತ್ತಿದ್ದೀರಿ ಎಂದಲ್ಲಿ, ಆದಷ್ಟು ಅದರ ಬಗ್ಗೆ ಇತರರ ಬಳಿ ಹೇಳಿಕೊಳ್ಳಬೇಡಿ. ಆ ವಿಷಯದಲ್ಲಿ ನೀವು ಯಶಸ್ಸು ಸಾಧಿಸಿದ ಬಳಿಕ, ನಿಮ್ಮ ಯಶಸ್ಸೇ ಗದ್ದಲ ಮಾಡಬೇಕು. ಅಲ್ಲಿಯವರೆಗೂ ನಿಮ್ಮ ಕೆಲಸದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿ.

- Advertisement -

Latest Posts

Don't Miss