Horoscope: 2025 ಶುರುವಾಗಿದೆ. ಹೊಸ ವರ್ಷವನ್ನು ಸುಮ್ಮನೆ ವೇಸ್ಟ್ ಮಾಡದೇ, ಏನಾದರೂ ಸಾಧಿಸಬೇಕು ಎಂದು ಹಲವರು ಅಂದುಕೊಂಡಿದ್ದಾರೆ. ಜೊತೆಗೆ ನಾವು ಈ ವರ್ಷ ಎಷ್ಟು ಲಕ್ಕಿ ಎಂದು ತಿಳಿಯಲು ಕಾತುರರಾಗಿದ್ದಾರೆ. ಹಾಾಗಾಗಿ ಖ್ಯಾತ ಜ್ಯೋತಿಷಿ ಶ್ರೀನಿವಾಸ್ ಗುರೂಜಿ ಯಾವ ರಾಶಿಯವರಿಗೆ ಏನು ಲಾಭ ನಷ್ಟ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೊದಲ ರಾಶಿಯಾದ ಮೇಷ ರಾಶಿಗೆ ಈ ವರ್ಷ ಏನೇನು ಫಲಾಫಲವಿದೆ ಅಂತಾ ತಿಳಿಯೋಣ ಬನ್ನಿ.
ಮೇಷ ರಾಶಿಯವರಿಗೆ ಈ ವರ್ಷ ಸಾಡೇಸಾಥಿ ಆರಂಭವಾಗಲಿದೆ. ಏಪ್ರಿಲ್ 1ರಿಂದ ಮೇಷ ರಾಶಿಯವರಿಗೆ ಸಾಡೇಸಾಥಿ ಶುರುವಾಗಲಿದೆ. ಸಾಡೇಸಾಥಿ ಆರಂಭವಾದಾಗ, ಕೋಪದ ವಾತಾವರಣವಿರುತ್ತದೆ. ಶತ್ರುಬಾಧೆ ಇರುತ್ತದೆ. ಕಲಹ, ಗೊಂದಲ, ಆರೋಗ್ಯದಲ್ಲಿ ಏರುಪೇರು. ಸಾಡೇಸಾಥಿ ಆರಂಭವಾದಾಗ, ಆ ಮನುಷ್ಯ ತಾಳ್ಮೆಯನ್ನೇ ಕಳೆದುಕೊಳ್ಳುತ್ತಾನೆ.
ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪ ಬರುತ್ತದೆ. ಗೊಂದಲ ಉಂಟಾಗುತ್ತದೆ. ಮಿತ್ರರೂ ಕೂಡ ಶತ್ರುಗಳಾಗುತ್ತಾರೆ. ಸಾಡೇಸಾಥಿ ಶುರುವಾದ ಎರಡೂವರೆ ವರ್ಷಗಳ ಕಾಲ, ಶನಿಯನ್ನು ಮಾರಕ ಶನಿ ಎನ್ನಲಾಗುತ್ತದೆ. ಏಕೆಂದರೆ, ಈ ಸಂದರ್ಭದಲ್ಲಿ ಕೋಪದಲ್ಲಿ ಹಲವು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಸ್ನೇಹ, ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಆದರೆ ಮೇಷ ರಾಶಿಯವರು ಭಯ ಪಡದೇ, ಇದೆಲ್ಲವನ್ನೂ ಎದುರಿಸಲು ಸಿದ್ಧರಿರಬೇಕು. ಏಕೆಂದರೆ, ಶನಿ ಎಂದರೆ ಧಣಿ ಇದ್ದ ಹಾಗೆ. ಆತ ನಿಮ್ಮ ಜೀವನಕ್ಕೆ ಬಂದಿದ್ದಾನೆ ಎಂದರೆ, ನೀವು ಅವನನ್ನು ಖುಷಿಯಿಂದ ಸ್ವಾಗತಿಸಬೇಕು. ಧರ್ಮ ಬಿಡದೇ ಅಧರ್ಮದತ್ತ ಒಲಿಯದೇ, ನಿಯತ್ತಿನ ಜೀವನ ನಡೆಸಬೇಕು. ಸ್ತ್ರೀಯರನ್ನು ಗೌರವಿಸಿ. ಸುಳ್ಳು, ಮೋಸ, ವಂಚನೆ ಮಾಡದೇ ಜೀವನ ನಿಭಾಯಿಸಿದರೆ, ಶನಿ ನಿಮ್ಮ ಜೀವನಕ್ಕೆ ಬಂದಿದ್ದಾನೆ ಅನ್ನೋ ಭಯವೇ ನಿಮಗಿರುವುದಿಲ್ಲ ಅಂತಾರೆ ಶ್ರೀನಿವಾಸ ಗುರೂಜಿ.
ಇನ್ನು ಸಾಡೇಸಾಥಿಗೆ ಪರಿಹಾರ ಅಂದ್ರೆ, ಹನುಮಾನ್ ಚಾಲೀಸಾ ಪಠಿಸಿ, ಇಲ್ಲವೇ ಕೇಳಿ. ಪ್ರತೀ ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಪೂಜೆ ಸಲ್ಲಿಸಿ. ಶನಿಯನ್ನು ಪಠಿಸಿ. ಹನುಮಂತನಿಗೆ ತೈಲಾಭಿಷೇಕ ಮಾಡುವುದರಿಂದ ಶನಿ ಕಾಟ ಕೊಡುವುದನ್ನು ಕಡಿಮೆ ಮಾಡುತ್ತಾನೆ ಅನ್ನುವ ನಂಬಿಕೆ ಇದೆ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324