Wednesday, October 22, 2025

Latest Posts

ಹಿಂದೂ ಧರ್ಮದಲ್ಲಿ ದೇವಿಯರೆಲ್ಲ ದತ್ತುಪುತ್ರಿಯರಾಗಿರುವ ಹಿಂದಿರುವ ರಹಸ್ಯವೇನು..?

- Advertisement -

Spiritual: ಹಿಂದೂ ಧರ್ಮದಲ್ಲಿ ಬರುವ ದೇವಿಯರು ಯಾರೂ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ, ದತ್ತುಪುತ್ರಿಯರೇ. ಉದಾಹರಣೆಗೆ ಶ್ರೀರಾಮ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ. ಆದರೆ ಸೀತೆ ಜನಕ ರಾಜನಿಗೆ ಹೊಲದಲ್ಲಿ ಚಿನ್ನದ ಪೆಟ್ಟಿಗೆಯಲ್ಲಿ ಸಿಕ್ಕಿದಳು. ಪಾರ್ವತಿ, ಪದ್ಮಾವತಿ, ರಾಧಾ, ದ್ರೌಪದಿ ಇವರೆಲ್ಲ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ ದತ್ತು ಪುತ್ರಿಯರು. ಹಾಗಾದರೆ ಇದರ ಹಿಂದಿರುವ ರಹಸ್ಯವೇನು..?. ತಿಳಿಯೋಣ ಬನ್ನಿ.

ರಾಧಾ, ಮಂಡೋಧರಿ, ದ್ರೌಪದಿ, ಸೀತೆ, ಪದ್ಮಾವತಿ, ಪಾರ್ವತಿ ಇವರೆಲ್ಲ ದತ್ತು ಪುತ್ರಿಯರು. ಮಂಡೋದರಿ, ಮಂಡೂಕವಾಾಗಿದ್ದವಳು, ಶಾಪಮುಕ್ತಳಾಗಿ, ಮನುಷ್ಯ ರೂಪ ತಾಳುತ್ತಾಳೆ. ಬಳಿಕ ಸಂತಾನಕ್ಕಾಗಿ ಪರಿತಪಿಸುತ್ತಿದ್ದ ಋಷಿ ದಂಪತಿಗೆ ಸಿಗುತ್ತಾಳೆ. ದ್ರೌಪದಿ ಅಗ್ನಿಯಿಂದ ಪ್ರತ್ಯಕ್ಷವಾಗುತ್ತಾಳೆ. ಸೀತೆ, ಹೊಲದಲ್ಲಿ ಚಿನ್ನದ ಪೆಟ್ಟಿಗೆಯಲ್ಲಿ ಸಿಗುತ್ತಾಳೆ. ಈ ರೀತಿ ಇವರೆಲ್ಲ ದತ್ತು ಪುತ್ರಿಯರೇ.

ಇದರ ಹಿಂದಿರುವ ಪ್ರಮುಖ ಕಾರಣವೇನು ಎಂದರೆ, ಹಲವು ದುಷ್ಟಶಕ್ತಿಗಳ ನಾಶಕ್ಕಾಗಿ, ಶಕ್ತಿ ದೇವಿ ಈ ರೀತಿ ರೂಪ ತಾಳಿದ್ದಳು. ಶಕ್ತಿ ಎಂದರೆ, ಆಕೆ ಮೂಲ ಪ್ರಕೃತಿ. ಇಡೀ ವಿಶ್ವವೇ ಆಕೆಯ ಗರ್ಭದಲ್ಲಿ ಇಟ್ಟುಕೊಂಡವಳು. ಹಾಗಾಗಿ ಯಾರ ಗರ್ಭದಿಂದಲೂ ಆಕೆ ಜನ್ಮ ತಾಳಲಿಲ್ಲ.

ಮತ್ತು ಯಾರು ಈ ರೀತಿ ದತ್ತು ಪುತ್ರಿಯಾಗಿದ್ದರೋ, ಆ ದೇವಿಯರಿಂದ ಹಲವು ದುಷ್ಟ ಶಕ್ತಿಗಳ ನಾಶವಾಗಿದೆ. ಸೀತೆಯಿಂದ ರಾವಣ, ಪಾರ್ವತಿಯಂದ ಹಲವು ರಾಕ್ಷಸರು, ದ್ರೌಪದಿಯಿಂದ ಕೌರವರು ಹೀಗೆ ಹಲವು ದುಷ್ಟ ಶಕ್ತಿಗಳನ್ನು ನಾಶ ಮಾಡಲೆಂದೇ, ಶಕ್ತಿ ದೇವತೆ ಭೂಮಿಯ ಮೇಲೆ ಈ ಅವತಾರವಾಗಿ ಜನಿಸಿದ್ದರು.

- Advertisement -

Latest Posts

Don't Miss