Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ವ್ಯಾಘ್ರತ ಯೋಗದಲ್ಲಿ 2025 ಆರಂಭವಾಗಿದೆ. ಅಂದರೆ ಕೆಟ್ಟ ಯೋಗದಲ್ಲೇ ವರ್ಷದ ಮೊದಲ ದಿನ ಆಂರಭವಾಗಿದೆ. ಅಗ್ನಿ ತತ್ವದಲ್ಲಿ ದಿನ ಪ್ರಾರಂಭವಾಗಿರುವ ಕಾರಣ, ಈ ವರ್ಷ ದೇಶದಲ್ಲಿ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಬಹುದು.
ಕಳೆದ ವರ್ಷ ವಿಮಾನ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದರು. ಅದೇ ರೀತಿ, ವಿಮಾನ ಅಪಘಾತ ಸಂಭವಿಸಿದೆ. ಅಲ್ಲದೇ, ಅತೀ ಹೆಚ್ಚು ಬೆದರಿಕೆ ಕರೆಗಳು, ವಿಮಾನಯಾನ ಮಾಡುವವರಿಗೆ ಬಂದಿದೆ.
ಉತ್ತಮ ವಿಷಯ, ಖುಷಿಯ ವಿಷಯ ಅಂದ್ರೆ ಏಪ್ರಿಲ್ ಬಳಿಕ ಶೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬರಲಿದೆ. ಶೇರು ಮಾರುಕಟ್ಟೆಯಲ್ಲಿ ದುಡ್ಡು ಹಾಕಿದವರಿಗೆ, ಉತ್ತಮ ಪ್ರಾಫಿಟ್ ಸಿಗಲಿದೆ. ತಾಮ್ರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಚಿನ್ನ- ಬೆಳ್ಳಿಯಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ ದೇಶದಲ್ಲಿ ಏಪ್ರಿಲ್ ಬಳಿಕ, ಶುಭ ಫಲಗಳಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.