Political News: ಪ್ರಿನ್ಸೆಸ್ ರಸ್ತೆಯ ಹೆಸರು ಬದಲಾವಣೆ ಮಾಡುವ ಸರ್ಕಾರದ ನಿರ್ಧಾರ ಖಂಡನೀಯ, ಪ್ರಿನ್ಸೆಸ್ ರಸ್ತೆಗೆ ಇತಿಹಾಸವಿದೆ. ಬೆಲೆ ಏರಿಕೆ, ಹಗರಣ, ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಲ್ಲಿ ವಿಳಂಬ ಸೇರಿದಂತೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಸರ್ಕಾರ ತನ್ನ ದುರಾಡಳಿತವನ್ನು ತಿದ್ದಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್ರಿನ್ಸೆಸ್ ರೋಡ್ ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ. ಕಾರಣವೆಂದರೆ, ಅಲ್ಲಿನ ಮಹಾರಾಜರು ತಮ್ಮ ತಂಗಿಯ ನೆನಪಿಗಾಾಗಿ ಆ ರೀತಿ ರಸ್ತೆಯ ನಾಮಕರಣ ಮಾಡಿದ್ದರು. ರಾಜಕುಮಾರಿ ನಿಶಾದಮಣಿಯವರ ನೆನಪಿಗಾಗಿ ಆ ರಸ್ತೆಗೆ ಪ್ರಿನ್ಸೆಸ್ ಎಂಬ ಹೆಸರನ್ನಿಡಲಾಗಿದೆ ಎಂದು ಯದುವೀರ್ ಹೇಳಿದರು.
ಅಲ್ಲದೇ, ಆ ರಸ್ತೆ ಪ್ರಿನ್ಸೆಸ್ ರಸ್ತೆಯಾಗಿಯೇ ಇರಲಿ ಎಂಬುದು ನಮ್ಮ ಆಶಯವೂ ಹೌದು. ಸರ್ಕಾರದ ವಿರುದ್ಧ ಇರುವ ಹಲವು ಆರೋಪಗಳು, ಬೆಳಕಿಗೆ ಬಂದಿರುವ ಹಗರಣಗಳು ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅಲ್ಲದೇ, ಸರ್ಕಾರಿ ನೌಕರರಿಗೆ, ಅಂಗನವಾಡಿ ಕಾಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಇದೆಲ್ಲ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಹಾಗಾಗಿ ಸಿಎಂ ಅದಕ್ಕೆ ಬೇಗ ಒಂದು ಪರಿಹಾರ ತರಬೇಕು ಎಂದು ಯದುವೀರ್ ಆಗ್ರಹಿಸಿದ್ದಾರೆ.




