Web News: ವಿಮಾನಯಾನ ಮಾಡುವುದಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಬೇರೆ ಬೇರೆ ರಾಜ್ಯ, ದೇಶ ಸುತ್ತುವುದಂದ್ರೆ ಈಗಿನ ಕಾಲದ ಜನರಿಗಂತೂ ಖುಷಿಯೋ, ಖುಷಿ. ಆದರೆ ಈ ಖುಷಿ ನಡುವೆ ನೀವು ಕೆಲವೊಂದಿಷ್ಟು ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಇದರಿಂದ ನೀವು ಕೆಲ ನಷ್ಟಗಳಿಂದ ತಪ್ಪಿಸಿಕೊಳ್ಳಬಹುದು.
ಮೊದಲನೇಯ ವಿಷಯ ನಿಮ್ಮ ಬ್ಯಾಾಗ್, ಟ್ರಾಲಿ ಚೆಕಿಂಗ್‌ಗೆ ಕಳುಹಿಸುವ ಮುನ್ನ ಅದರ ಎರಡೂ ಬದಿಯ ಫೋಟೋ ತೆಗೆದಿಟ್ಟುಕೊಳ್ಳಿ. ಏಕೆಂದರೆ, ನಿಮ್ಮ ಲಗೇಜನ್ನು ಯಾರೂ ಕೂಡ, ಸಾಫ್ಟ್ ಆಗಿ ಹ್ಯಾಂಡಲ್ ಮಾಡುವುದಿಲ್ಲ. ರಫ್ ಆಗಿಯೇ ಹ್ಯಾಂಡಲ್ ಮಾಡುತ್ತಾರೆ. ಈ ವೇಳೆ ನಿಮ್ಮ ಲಗೇಜ್‌ಗೆ ಹಾನಿಯುಂಟಾಗಬಹುದು. ನೀವು ಯಾವುದೇ ಫ್ರೂಫ್ ಇರದೇ, ವಾದ ಮಾಡಲು ಹೋದರೆ, ಅವರು ಅವರ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಆದರೆ ನಿಮ್ಮ ಲಗೇಜ್ ಮೊದಲು ಯಾವ ರೀತಿ ಇತ್ತು ಅಂತಾ ನಿಮ್ಮ ಬಳಿ ಫೋಟೋ ಫ್ರೂಫ್ ಇದ್ದರೆ, ನಿಮ್ಮ ನಷ್ಟವನ್ನು ಕಂಪನಿಯವರೇ ಭರಿಸಿಕೊಡುತ್ತಾರೆ.
ಎರಡನೇಯ ವಿಷಯ ನಿಮ್ಮ ಫ್ಲೈಟ್ ಬಗ್ಗೆ ತಿಳಿಯಲು ಗೂಗಲ್‌ನಲ್ಲಿ ಹೋಗಿ, ನಿಮ್ಮ ಫ್ಲೈಟ್ ನಂಬರ್ ಹಾಾಕಿ. ಆಗ ನಿಮ್ಮ ಫ್ಲೈಟ್ ಎಷ್ಟು ಗಂಟೆಗೆ ಹೊರಡುತ್ತದೆ ಅನ್ನೋ ಮಾಹಿತಿ ನಿಮಗೆ ತಿಳಿಯುತ್ತದೆ.
ಮೂರನೇಯ ವಿಷಯ, ಏರ್ಪೋರ್ಟ್‌ನಲ್ಲಿ ಸಾಮಾನ್ಯ ತಿಂಡಿಯೂ ಬಲು ದುಬಾರಿಯಾಗಿರುತ್ತದೆ. ಹಾಗಾಗಿ ಕೆಲವು ಕ್ರೆಡಿಟ್ ಕಾರ್ಡ್‌ಗಳನ್ನು ನಾವು ಬಳಸುವುದರಿಂದ, ನಮಗೆ ಕುಳಿತುಕೊಂಡು ವಿರಮಿಸಲು ಜಾಗ, ಸ್ವಚ್ಛವಾಗಿರುವ ವಾಶ್‌ರೂಮ್ ಮತ್ತು 1ರಿಂದ 2 ರೂಪಾಯಿಗೆ ಹೊಟ್ಟೆ ತುಂಬ ಊಟವೂ ಸಿಗುತ್ತದೆ. ಅಲ್ಲದೇ, ನೀವು ಉದ್ದೂದ್ದ ಲೈನ್‌ನಲ್ಲಿ ನಿಂತು ಸುಸ್ತಾಗುವ ಬದಲು, ಸರ್ಕಾರದ ಆ್ಯಪ್ ಆಗಿರುವ ಡಿಜಿಯಾತ್ರಾ ಆ್ಯಪನ್ನು ಡೌನ್‌ಲೌಡ್ ಮಾಡಿ, ಬೇಗ ಬೇಗ ಎಲ್ಲ ಚೆಕ್‌ಇನ್ ಮುಗಿಸಿ ನೀವು ಫ್ಲೈಟ್ ಏರಬಹುದು.