Sports News: ಕ್ರಿಕೇಟಿಗ, ಕನ್ನಡಿಗ ಮನೀಷ್ ಪಾಂಡೆ ಕೂಡ ಚಹಲ್ ದಾರಿ ಹಿಡಿದರಾ ಅನ್ನೋ ಪ್ರಶ್ನೆ ಎದ್ದಿದೆ. ಹೊಸ ವರ್ಷದ ಸಂದರ್ಭದಲ್ಲಿ ಕ್ರಿಕೇಟಿಗ ಚಹಲ್ ಮತ್ತು ಧನುಶ್ರೀ ಬೇರೆ ಬೇರೆಯಾಗಿದ್ದಾರೆ ಅಂತಾ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ, ಇಬ್ಬರೂ ಇನ್‌ಸ್ಚಾಗ್ರಾಮ್‌ನಲ್ಲಿ ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿದ್ದರು. ಫೋಟೋಸ್ ಎಲ್ಲ ಡಿಲೀಟ್ ಮಾಡಿದ್ದರು. ಇದೀಗ ಮನೀಷ್ ಪಾಂಡೆ ಇನ್‌ಸ್ಟಾಗ್ರಾಮ್‌ನಲ್ಲೂ ಒಂದೂ ವಿವಾಹ ಫೋಟೋ, ಪತ್ನಿ ಜೊತೆಗಿನ ಫೋಟೋ ಕಾಣುತ್ತಿಲ್ಲ. ಅಲ್ಲದೇ ಮನೀಷ್ ಮತ್ತು ಅವರ ಪತ್ನಿ ಒಬ್ಬರನ್ನೊಬ್ಬರು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ.
ಮನೀಷ್ ಪಾಂಡೆ ಡಿಸೆಂಬರ್ 2, 2019ರಲ್ಲಿ ಆಶ್ರೀತಾ ಶೆಟ್ಟಿ ಎಂಬುವವರನ್ನು ವಿವಾಹವಾಾಗಿದ್ದರು. ಕಳೆದ ವರ್ಷ ಜೂನ್‌ನಿಂದಲೇ ಇಬ್ಬರೂ ಬೇರೆಯಾಗಿರುವ ಸುದ್ದಿ ಇದ್ದು, ಆಗಲೇ ಆಶ್ರೀತಾ ತಮ್ಮ ಇನ್‌ಸ್ಚಾಗ್ರಾಮ್‌ನಲ್ಲಿದ್ದ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು. ಬಳಿಕ ಮನೀಷ್ ಕೂಡ ಹೀಗೆ ಮಾಡಿದ್ದು, ಇತ್ತೀಚೆಗೆ ಇನ್‌ಸ್ಟಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆಂಬ ಸುದ್ದಿ ಇದೆ.
ಒಟ್ಟಾರೆಯಾಗಿ ಮೊಹಮ್ಮದೇ ಶಮಿ, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯಾ ಸೇರಿ ಹಲವು ಕ್ರಿಕೇಟಿಗರು ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ವಿಷಯಕ್ಕಾಗಿ ಸುದ್ದಿಯಾಗಿದ್ದರು. ಇದೀಗ ಮನೀಷ್ ಪಾಂಡೆ ಬಗ್ಗೆಯೂ ಇಂಥದ್ದೇ ಗುಸುಗುಸು ಶುರುವಾಗಿದ್ದು, ಈ ಬಗ್ಗೆ ಇನ್ನೂ ಇಬ್ಬರೂ ಸ್ಪಷ್ಟನೆ ನೀಡಲಿಲ್ಲ.