- Advertisement -
National News: ತಿಹಾರ್ ಜೈಲಿನಲ್ಲಿ ಬಂಧಿತನಾಗಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಛೋಟಾ ರಾಜನ್, ಇದೀಗ ಸೈನಸ್ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಗ್ಯ ಸಮಸ್ಯೆ ತಾರಕಕ್ಕೇರಿದ್ದು, ಆಪರೇಷನ್ ಮಾಡಬೇಕೆಂದು ಹೇಳಲಾಗಿದೆ. ಈ ಕಾರಣಕ್ಕೆ ಛೋಟಾ ರಾಜನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 30 ವರ್ಷಗಳ ಕಾಲ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜನ್ ತಲೆ ಮರೆಸಿಕೊಂಡಿದ್ದ. ಇಂಡೋನೇಷಿಯಾದಲ್ಲಿ ತಲೆ ಮರೆಸಿಕೊಂಡಿದ್ದ ಛೋಟಾ ರಾಜನ್‌ನನ್ನು ಸ್ಥಳೀಯ ಪೊಲೀಸರು ಬಂಧಿಸಿ, ಬಾಲಿಗೆ ಸ್ಥಳಾಂತರಿಸಿ, ಬಳಿಕ ಭಾರತದ ತಿಹಾರ್ ಜೈಲಿಗೆ ಹಾಕಿದ್ದರು.
ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಯತ್ನ ಸೇರಿ 7ರಿಂದ 8 ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದೆ. ಇದೀಗ ಶಿಕ್ಷೆ ಅನುಭವಿಸುತ್ತಿರುವ ಛೋಟಾ ರಾಜನ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನಾಗಿದ್ದ.
- Advertisement -